ಗೋವಾದಲಲಿ ಉದ್ಯಮಿಯಾಗಿದ್ದುಕೊಂಡು ಹಲವಾರು ಸಮಾಜ ಸೇವೆಯನ್ನು ಮಾಡಿ ಸಮಾಜ ಸೇವಕರೆನಿಸಿಕೊಂಡ ಮುಡಾರು ಅಶೋಕ್ ಶೆಟ್ಟಿಯವರಿಗೆ ಗೋವಾ ರಾಜ್ಯ ಬೆಸ್ಟ್ ಸೋಷಿಯಲ್ ವರ್ಕ್ ಅವಾರ್ಡ್ ನೀಡಿ ಗೌರವಿಸಿದೆ.
ಡಿ. 19ಗೋವಾ ರಾಜ್ಯ ವಿಮೋಚನಾ ದಿನದ ಅಂಗವಾಗಿ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವನ್ ಇವರಿಗೆ ಅವಾರ್ಡ್ ನೀಡಿ ಗೌರವಿಸಿದೆ.
ಮುಡಾರು ಗ್ರಾಮದ ಅರಂತಬೆಟ್ಟುವಿನ ನಿವಾಸಿಯಾಗಿರುವ ಅಶೋಕ್ ಶೆಟ್ಟಿಯವರು 1987ರಲ್ಲಿ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳಿದ್ದರು. ಪ್ರಬಲ ಹಿಂದುತ್ವವಾಗಿದ್ದ ಇವರು ಆರ್‌ಎಸ್‌ಎಸ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯ ರಂಗದಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದರು. ಪಟ್ಲ ಫೌಂಡೇಶನ್ ಗೋವಾ ಹಾಗೂ ತುಳು ಕೂಟ ಗೋವಾ ಇದರ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ಮಿ ಶೈಲಜಾ ಶೆಟ್ಟಿ, ಪುತ್ರರಾದ ಅಶ್ವಿತ್ ಶೆಟ್ಟಿ ಹಾಗೂ ಅನ್ವಿತ್ ಶೆಟ್ಟಿ ಇವರೊಂದಿಗೆ ಗೋವಾದ ಪಣಜಿಯಲ್ಲಿ ಕೋರ್ವೋರಿಯಮ್‌ನಲ್ಲಿ ವಾಸವಾಗಿದ್ದಾರೆ.
ಅಶೋಕ್ ಶೆಟ್ಟಿಯವರ ಸಾಮಾಜಿಕ ಸೇವೆಯನ್ನು ಗುರುತಿಸಿ ಗೋವಾ ಸರಕಾರ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಗೋವಾ ತುಳುಕೂಟ ಅಧ್ಯಕ್ಷ ಗಣೇಶ್ ಶೆಟ್ಟ ಇರ್ವತ್ತೂರು ತಿಳಿಸಿದ್ದಾರೆ.