ಹೆಬ್ರಿ : ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ನಡೆಯುವ ಲಯನ್ಸ್ ಪ್ರಾಂತೀಯ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದು ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಹೇಳಿದರು.
ಅವರು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಗೆ ಶನಿವಾರ ಅಧೀಕೃತ ಬೇಟಿ ನೀಡಿ ಮಾತನಾಡಿದರು. ಜನಸೇವೆ ಲಯನ್ಸ್ ನಮಗೆ ದಾರಿ ತೋರಿದೆ. ಜನಸಂಪತ್ತು ನೀಡಿದೆ, ನಾಡಿನಾದ್ಯಂತ ಜನ ನಮ್ಮನ್ನು ಗುರುತಿಸಲು ಲಯನ್ಸ್ ಸಂಸ್ಥೆಯಿಂದ ಸಾಧ್ಯವಾಗಿದೆ ಎಂದು ಹರೀಶ ಪೂಜಾರಿ ಹೇಳಿದರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವರ ಸಹಕಾರ ಕೋರಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಸಹಾಯಧನ ವಿತರಿಸಲಾಯಿತು. 2ನೇ ಝೋನ್ ಅಡೈಸರಿ ಕಮಿಟಿ ಸಬೆ ನಡೆಯಿತು.
ಹೆಬ್ರಿ ಲಯನ್ಸ್ ಕ್ಲಬ್ ಭೀಷ್ಮ ಖ್ಯಾತಿಯ ಹೆಬ್ರಿ ಟಿ.ಜಿ. ಆಚಾರ್ಯ, ವಲಯಾಧ್ಯಕ್ಷ ರಘುರಾಮ ಶೆಟ್ಟಿ, ಅಜೆಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಕುಮಾರ್, ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಭಂಡಾರಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹರೀಶ ಶೆಟ್ಟಿ, ಕೋಶಾಧಿಕಾರಿ ಆಶಾ ಭುಜಂಗ ಶೆಟ್ಟಿ, ಹೆಬ್ರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ವಿವಿಧ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ಸ್ ಪ್ರಾಂತೀಯ ಸಮ್ಮೇಳನಕ್ಕೆ ಸಮ್ಮೇಳನ ಸಮಿತಿಯನ್ನು ರಚಿಸಲಾಯಿತು.