ನೂತನ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಡಾ ಸುಧಾಕರ್ ಅವರನ್ನು ಆಲೂರು ತಾಲೂಕಿನಮಗ್ಗೆ ಕ್ಷೇತ್ರದ ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್ ಭೇಟಿ ಮಾಡಿ ಆಲೂರು ತಾಲೂಕಿನಲ್ಲಿರುವ ಸಮಸ್ಯೆಗಳಾದ ಕಾಡಾನೆ ಸಮಸ್ಯೆ. ಹಾಗೂ ತಾಲೂಕಿನಲ್ಲಿ ರೈಲ್ವೆ ನಿಲುಗಡೆಯನ್ನು ಮಾಡುವಂತೆ ಮನವಿ ಮಾಡಿದರು.
ತಾಲೂಕಿನ ಅಭಿವೃದ್ಧಿಯ ಬಗ್ಗೆ ತಾವುಗಳು ಗಮನ ಹರಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಆಲೂರುನಲ್ಲಿ ಸಾಮಾಜಿಕ ಸಮಸ್ಯೆಗಳೇ ಹೆಚ್ಚಿದ್ದು ಈ ನಿಟ್ಟಿನಲ್ಲಿ ಶ್ರಮ ವಹಿಸುವಂತೆ ತಿಳಿಸಿದರು.