ಮೂಡುಬಿದಿರೆ: ಯುಗಪುರುಷ ಕಿನ್ನಿಗೋಳಿ ಮತ್ತು ವಾಯ್ಸ್ ಆಫ್ ಆರಾಧನಾ ಸಹಯೋಗದೊಂದಿಗೆ ರಾಜ್ಯಮಟ್ಟದ ಮಕ್ಕಳ ಹಬ್ಬ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಭುವನಾಭಿರಾಮ ಉಡುಪ ಇವರ ಮಾರ್ಗದರ್ಶನದಲ್ಲಿ, ಪದ್ಮಶ್ರೀ ಭಟ್ ನಿಡೋಡಿ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ರಾಜ್ಯಮಟ್ಟದ ಮಕ್ಕಳ ಹಬ್ಬ ವಿದ್ಯಾರ್ಥಿ ಆಶ್ರಿತ್ ಕಶ್ಯಪ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಸಮ್ಮೇಳನದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಕುಮಾರಿ ಶ್ರೇಯಾ ಎಂ.ಜಿ. ಸುಳ್ಯ ವಹಿಸಿದ್ದು ಉದ್ಘಾಟನೆಯನ್ನು ವಿದ್ಯಾರ್ಥಿ ಕೇಶವ ಭಟ್ ನೆರವೇರಿಸಿದರು, ಸ್ವಾಗತ ಮತ್ತು ಪ್ರಸ್ತಾವನೆಯನ್ನು ಹಿರಿಯರಾದ ಭುವನಾಭಿರಾಮ ಉಡುಪ ನೆರವೇರಿಸಿದರು. ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗರಿ ರಾಘವೇಂದ್ರ ರಾವ್, ಮೋಹನದಾಸ ಸುರತ್ಕಲ್, ಅಜಿತ್ ಕೆರೆಕಾಡು, ಪದ್ಮಶ್ರೀ ಭಟ್ ನಿಡ್ಡೋಡಿ, ಆಗಮಿಸಿದ್ದರು.
ಯುಗಪುರುಷ ಪ್ರಧಾನ ಸಂಪಾದಕರಾದ ಭುವನಾಭಿರಾಮ ಉಡುಪ ಮಾತನಾಡಿ ಯುಗಪುರುಷ ಸಂಸ್ಥೆ 78 ವರ್ಷ ಪೂರೈಸಿದ್ದು, ಕರ್ನಾಟಕದಲ್ಲಿ ಅತಿ ಸುಧೀರ್ಘಕಾಲ ಪತ್ರಿಕೆ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದ, ಸಮಾಜಮುಖಿ ಕೆಲಸವನ್ನ ನಿರ್ವಹಿಸುತ್ತಾ ಬಂದದ್ದು ಮುಂದುವರಿಸುವುದಾಗಿ ತಿಳಿಸಿದರು. ರಾಜ್ಯಮಟ್ಟದ ಮಕ್ಕಳ ಹಬ್ಬಕ್ಕೆ ಶುಭ ಹಾರೈಸಿದರು.
ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್ ಮಾತನಾಡಿ, ಸಮಾಜದ ಬಹಳ ಜನರ ಸಹಕಾರದಿಂದ, ನಿರಂತರವಾಗಿ ಮಕ್ಕಳಿಗೆ ವೇದಿಕೆಯನ್ನ ಕಲ್ಪಿಸುತ್ತಾ ಬಂದಿದ್ದು, ತಮ್ಮ ಸಂಸ್ಥೆಯಿಂದ ಗುರುತಿಸಿದ ಹಲವು ಮಕ್ಕಳು ಇಂದು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು ಸಂತೋಷ ತಂದಿದೆ ಎಂದರು. ಇಂದಿನ ರಾಜ್ಯಮಟ್ಟದ ಮಕ್ಕಳ ಹಬ್ಬಕ್ಕೆ ಕರ್ನಾಟಕ ರಾಜ್ಯದ ಹಲವು ಪ್ರದೇಶಗಳಿಂದ ಪ್ರತಿಭೆಗಳು ಆಗಮಿಸಿದ್ದು ಅವರೆಲ್ಲರಿಗೂ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಆಶ್ರಿತ್ ಕಶ್ಯಪ್ ಬರೆದ ಪುಸ್ತಕವನ್ನು ಪತ್ರಕರ್ತ ಮಂದಾರ ರಾಜೇಶ್ ಭಟ್ ಹಾಗೂ ಶಿಕ್ಷಕರಾದ ರಾಮಕೃಷ್ಣ ಶಿರೂರು ಬಿಡುಗಡೆಗೊಳಿಸಿ ಅಭಿನಂದಿಸಿದರು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಗುರುಪ್ರಸಾದ್ ಭಟ್ ಹಾಗೂ ವಂದನಾರ್ಪಣೆಯನ್ನು ಸತೀಶ್ ಅಬನಡ್ಕ ನೆರವೇರಿಸಿದರು.
ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಕ್ಕಳ ಕವಿಗೋಷ್ಠಿ, ನೃತ್ಯ, ಸಂಗೀತ, ಹಾಡು, ತಬಲವಾದನ, ಕಥೆ, ಕವಿತೆ, ಲಘು ಸಂಗೀತ, ಭಕ್ತಿಗೀತೆ ಸೇರಿದಂತೆ ಹಲವು ಪ್ರತಿಭೆಗಳು ಅನಾವರಣಗೊಂಡವು, ಸುಮಾರು ನೂರಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದ್ದು ಅವರೆಲ್ಲರಿಗೂ ಪ್ರಶಂಸಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮಂದಾರ ರಾಜೇಶ್ ಭಟ್, ದಿನ್ ರಾಜ್ ಕೆ, ಅರುಣ್ ಅಜೇಕಾರ್, ಬಸವರಾಜ ಮಂತ್ರಿ, ಸತೀಶ್ ಅಬನಡ್ಕ, ಮಲ್ಲಿಕಾ, ಅಭಿಷೇಕ್ ಶೆಟ್ಟಿ ಐಕಳ, ಪ್ರಮೀಳಾ ಶೆಟ್ಟಿ, ವಿನಯ್ ಎಂ ಎಸ್, ಭವ್ಯ ವಿನಯ್ ಸಹಕಾರ ನೀಡಿದರು.
ಕಾರ್ಯಕ್ರಮದ ನೇರ ಪ್ರಸಾರವನ್ನು ತುಳುನಾಡು ವಾರ್ತೆ ಹಾಗೂ ರೇಡಿಯೋ ಸಾರಂಗ್ ನೆರವೇರಿಸಿದರು.