ನವಂಬರ್ ತಿಂಗಳಲ್ಲಿ ನಡೆದ ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ (ಸಿಎ ಫೈನಲ್) ರಕ್ಷಾ ಶೆಟ್ಟಿ ತೇರ್ಗಡೆಯಾಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೈಲೂರು ಬಿಇಎಂ ಶಾಲೆ ಮತ್ತು ಕೆಎಂಇಎಸ್ ಶಾಲೆಯಲ್ಲಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಜ್ಞಾನಸುಧಾ ಕಾಲೇಜು ಮತ್ತು ಬಿ.ಕಾಂ ಪದವಿಯನ್ನು ಆಳ್ವಾಸ್‌ನಲ್ಲಿ ಪೂರೈಸಿದ್ದರು.
ಆರ್ಟಿಕಲ್‌ಶಿಪ್‌ನ್ನು ಕಾರ್ಕಳದ ಸಿ.ಎ ರಮೇಶ್‌ರಾವ್ ಹಾಗೂ ಅಶೋಕ್ ಶೆಟ್ಟಿ ಆ್ಯಂಡ್ ಕಂಪೆನಿ ಮುಂಬೈ ಇವರ ಮಾರ್ಗದರ್ಶನದಲ್ಲಿ ಪಡೆದಿರುತ್ತಾರೆ.
ರಕ್ಷಾ ಶೆಟ್ಟಿ ಬೈಲೂರು ಸೌಂದರ್‍ಯ ಕಾಂಪ್ಲೆಕ್ಸ್‌ನ ಮಾಲಕರಾದ ರಮೇಶ್ ಶೆಟ್ಟಿ ಹಾಗೂ ಶಾಲಿನಿ ಶೆಟ್ಟಿ ದಂಪತಿಯವರ ಪುತ್ರಿ.