ಹೊಸ ವರ್ಷಾಚರಣೆಯ ಹೆಸರಿನಲ್ಲಿ ನಡೆಯುವ ಡ್ರಗ್ಸ್, ಗಾಂಜಾ ಮಾಫಿಯಾ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ಜಾಗೃತೆ ವಹಿಸುವಂತೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷದ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅನೈತಿಕ ಚಟುವಟಿಕೆಯ ಮಾಫಿಯ ಸಕ್ರೀಯಗೊಳ್ಳುವ ಸೂಚನೆ ಲಭಿಸಿರುವುದಾಗಿ ಅವರು ತಿಳಿಸಿದ್ದಾರೆ. ಹೊಸವರ್ಷಾಚರಣೆ ಹೆಸರಿನಲ್ಲಿ ಯಾವುದೇ ರೀತಿಯ ಪಾರ್ಟಿಗಳನ್ನು ತಡರಾತ್ರಿಯವರೆಗೆ ರೆಸಾರ್ಟ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿಯನ್ನು ಸಂಬಂಧ ಪಟ್ಟ ಇಲಾಖೆಗಳು ಅವಕಾಶ ನೀಡಬಾರದು, ಒಂದು ವೇಳೆ ಅವಕಾಶ ನೀಡಿದ್ದಲ್ಲಿ ಸಾರ್ವಜನಿಕರು ಸೇರಿ ಕಾರ್ಯಕ್ರಮ ವನ್ನು ತಡೆಯುವಾಗ ಅಲ್ಲಿ ಆಗುವ ಅನಾಹುತಕ್ಕೆ ನೇರ ಇಲಾಖೆಯೇ ಕಾರಣವಾಗುತ್ತದೆ ಎಂದು ಕೂಡ ಅವರು ಎಚ್ಚರಿಸಿದ್ದಾರೆ.