ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನದ 2025 ಸಾಲಿನ ವಾರ್ಷಿಕ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸಮವಸ್ತ್ರ(ಸೀರೆ) ಪ್ರಸಾದ ವಿತರಣೆಯು ಡಿ. 31ರಂದು ಜರುಗಿತು.
ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರುಕ್ಕಯ ಪೂಜಾರಿ ನವೋದಯ ಅಳಿಯೂರು, ಉತ್ಸವ ಸಮಿತಿ ಅಧ್ಯಕ್ಷರಾದ ಜಯನಂದ ಶೆಟ್ಟಿ ಗೇಂದೊಟ್ಟು ಮತ್ತು ಸ್ವಾಗತ ಸಮಿತಿ ಅಧ್ಯಕ್ಷರಾದ ಹರೀಶ್ ಆಚಾರ್ಯ ನೆಲ್ಲಿಕಾರ್ ಇವರಿಂದ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀಮತಿ ರಮಣಿ ಆಳ್ವ ಬೆಳುವಾಯಿ, ಶಶಿ ಕುಮಾರ್, ಮಾನಸ, ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಗೌರವ ಅಧ್ಯಕ್ಷರಾದ ಅಶೋಕ್ ಕುಮಾರ್ ಮಾಂಟ್ರಾಡಿ, ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ಹೌದಾಲ್, ಲೆಕ್ಕ ಪರಿಶೋಧಕರಾದ ಲಿಂಗಪ್ಪ ಪೂಜಾರಿ ಮಾಂಟ್ರಾಡಿ, ಗ್ರಾಮ ಸಮಿತಿ ಸಂಚಾಲಕರಾದ ಮೋನಪ್ಪ ಪೂಜಾರಿ ಮೂಡುಕೊಣಾಜೆ, ವೀರಪ್ಪ ಪೂಜಾರಿ ಬಂಟಾಲ್, ರಮೇಶ್ ಪೂಜಾರಿ ಕಲ್ಲಡ್ಕ, ವಿಷ್ಣುಮೂರ್ತಿ ರಾವ್, ಪ್ರದೀಪ್ ಮಾಂಟ್ರಾಡಿ, ಸಂಜೀವ ಶಾಂತಿ, ಸಂತೋಷ್ ಕಂದಿರು , ಪ್ರಶಾಂತ್ ಬೆಳುವಾಯಿ, ಸಾಗರ್ ಸುನಿಲ್ ಅಲ್ಲಿಪಾದೆ, ಪ್ರಭಾತ್ ಕುಮಾರ್ ಜೈನ್ ನೆಲ್ಲಿಕಾರ್, ನಾರಾಯಣ ಪೂಜಾರಿ ಮುಗೆರಡ್ಕ, ಶ್ರೀಮತಿ ದೇವಕಿ ಕೃಷ್ಣಪ್ಪ ಕೆಂಬುಡಲ್ಕೆ, ಶ್ರೀಮತಿ ಗೀತಾ ಸದಾನಂದ ಭಾಗ್ಯಶ್ರೀ, ಶ್ರೀಮತಿ ಜಯಂತಿ ಗುಂಡಡಪ್ಪು, ಶ್ರೀಮತಿ ನೀಲಮ್ಮ ಜಾರಪ್ಪ ಜೆ.ಎನ್.ಎಸ್., ಶ್ರೀಮತಿ ಬೇಬಿ ಅಶೋಕ್ ಕುಮಾರ್, ಶ್ರೀಮತಿ ಸುರೇಖ ಗೋಪಿನಾಥ್ ಮುಲ್ಕಿ , ಇನ್ನಿತರರು ಉಪಸ್ಥಿತರಿದ್ದರು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿ ಸರ್ವರನ್ನು ಸ್ವಾಗತಿಸಿದರು.