ಕಾರ್ಕಳ: ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಇರ್ವತ್ತೂರು ಗ್ರಾಮ ಪಂಚಾಯತ್ ಸಮೀಪ ಡಿ. 30 ರಂದು ನಡೆದಿದೆ.
ಇರ್ವತ್ತೂರು ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿರುವ ಕಟ್ಟಡದಲ್ಲಿ ವಿಠಲ, ರೋಹಿತ್, ಸುದರ್ಶನ್, ಹಾಗೂ ಜಯ ಎಂಬವರು ಕಾಂಕ್ರಿಟ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಭರತ್ ಎಂಬವರು ರೋಹಿತ್ ಇವರೊಂದಿಗೆ ಜಗಳ ಮಾಡುತ್ತಿರುವಾಗ ಇವರನ್ನು ಬಿಡಿಸಲು ಬಂದ ವಿಠಲ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದರು.
ಅದರೆ ಇಲ್ಲಿಗೆ ನಿಲ್ಲದ ಜಗಳ ಸಂಜೆ 5.30 ಗಂಟೆಯಿಂದ 06.00 ಗಂಟೆಯ ನಡುವಿನ ಅವಧಿಯಲ್ಲಿ ಭರತ್ ಮತ್ತು ಭವಿಷತ್ ರವರು ಇತರ 10 ಜನರೊಂದಿಗೆ ಬಂದು ಎಕಾಏಕಿ ರಾಡ್ ಹಾಗೂ ಕಟ್ಟಿಗೆಯಿಂದ ಜಯ ಮತ್ತು ಸುದರ್ಶನ್ ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದರು. ಗಾಯಗೊಂಡ ಸುದರ್ಶನ್ ಮತ್ತು ಜಯ ರವರು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.