ಕಾರ್ಕಳ ತಾಲೂಕಿನ ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷರಾಗಿ ಸಿರಿಯಣ್ಣ ಶೆಟ್ಟಿ ಹಿರ್ಗಾನ ಹಾಗೂ ಉಪಾಧ್ಯಕ್ಷರಾಗಿ ರವೀಂದ್ರ ಕುಮಾರ್ ಕುಕ್ಕುಂದೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ. 08ರಂದು ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ಜಯಂತಿ ಎಸ್. ನಿರ್ವಹಿಸಿದರು.
ಉದ್ಯಮಿ ಚೇತನ್ ಶೆಟ್ಟಿ, ವಾಸು ಶೆಟ್ಟಿ, ಮಾಜಿ ನಿರ್ದೇಶಕರಾದ ಎಂ. ರತ್ನಾಕರ ರಾವ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಜಯಂತ್ ಕುಮಾರ್, ಸಂಘದ ನಿರ್ದೇಶಕರಾದ ಶಂಕರ ನಾಯಕ್, ಹರೀಶ್ ಶೆಟ್ಟಿ, ತಾರಾನಾಥ ಶೆಟ್ಟಿ, ಉಮೇಶ್ ನಾಯ್ಕ್, ಪ್ರಕಾಶ್ ಗೋಕುಲ್ ನಾಯ್ಕ್, ಕಲ್ಯಾಣಿ ಶೆಟ್ಟಿ, ರತ್ನಾವತಿ ಎನ್. ನಾಯಕ್, ಅನಿಲ್ ಪೂಜಾರಿ ಈ ಸಂದರ್ಭದಲ್ಲಿದ್ದರು.
ಜಯಂತ್ ಕುಮಾರ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಂದಿಸಿದರು.