ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಆಲೂರು ತಾಲೂಕಿನ ಮಗ್ಗೆ ರಾಯರ ಕೊಪ್ಪಲು ರಸ್ತೆ, ವೈ.ಎನ್. ಪುರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜ.09ರಿಂದ 13ರವರೆಗೆ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿದಿನ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಾತ್ರಾ ಮಹೋತ್ಸವದ ವಿಶೇಷ ಹೋಮ ಹಾಗೂ ಉತ್ಸವಗಳು ನಡೆಯಲಿವೆ. ಪ್ರತಿ ದಿನ ಮುಂಜಾನೆ 5 ಗಂಟೆಗೆ ಅಮ್ಮನವರಿಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ನಡೆಯಲಿದೆ.
ಜ.9 ರ ಗುರುವಾರದಂದು ಬನಶಂಕರಿ ಅಮ್ಮನವರಿಗೆ ಪುಷ್ಯ, ಶುದ್ಧ ದಶಮಿ ಗಂಗಾ ಪೂಜೆ, ಮೂಲದೇವರ ಅನುಜ್ಞೆ, ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಕಲಶ ಸ್ಥಾಪನೆ, ರಕ್ಷಾಬಂಧನ, ಋತ್ವಿಗ್ನರುಣ, ಧ್ವಜಾರೋಹನ, ಮೃತ್ತಿಕಾ ಸಂಗ್ರಹಣ, ಅಂಕುರಾರೋಹಣ, ಅಗ್ನಿ ಪ್ರತಿಷ್ಠಾಪನೆ. ವಾಸ್ತು ಹೋಮ, ವಾಸ್ತುಬಲಿ, ಪ್ರಾಕಾರರೋತ್ಸವ, ಅಷ್ಟದಿಕ್ಖಾಲಕ ಬಲಿ ನಡೆಯುತ್ತದೆ.
ಜ.10ರ ಶುಕ್ರವಾರದಂದು ಪುಷ್ಯ, ಶುದ್ಧ ಏಕಾದಶಿ
ಸಹಸ್ರಮೋದಕ ಶ್ರೀ ಮಹಾ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ನಡೆಯುತ್ತದೆ.
ಜ.11ರ ಶನಿವಾರದಂದು ಶ್ರೀ ದುರ್ಗಾ ಹೋಮ ಶ್ರೀ ಸೂಕ್ತ ಹೋಮ, ಶ್ರೀ ಸರಸ್ವತಿ ಹೋಮ ಶ್ರೀ ಸುಬ್ರಹ್ಮಣ್ಯ ಹೋಮ, ಶ್ರೀ ರುದ್ರ ಹೋಮ, ಗಿರಿಜಾ ಶಂಕರ ಕಲ್ಯಾಣೋತ್ಸವ ನಡೆಯುತ್ತದೆ.
ಜ.12 ಭಾನುವಾರದಂದು ಪ್ರಷ್ಯ, ದ್ವಾದಶಿ, ತ್ರಯೋದಶಿ ಹಾಗೂ ಸಂಜೆ 6.30 ಗಂಟೆಗೆ
ನವ ಚಂಡಿಕಾ ಹೋಮ ದುರ್ಗಾ ದೀಪಾನಮಸ್ಕಾರ ನಡೆಯುತ್ತದೆ.
ಜ.13 ರ ಸೋಮವಾರದಂದು ಪುಷ್ಯ, ಶುದ್ಧ ಪೌರ್ಣಮಿ ಬನದ ಹುಣ್ಣಿಮೆಯ ಮಧ್ಯಾಹ್ನ 12.45 ರಿಂದ 1.30 ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಬ್ರಹ್ಮ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ, ಸಂಜೆ 4.30ಕ್ಕೆ ಧೂಳೋತ್ಸವ ಮತ್ತು ರಾತ್ರಿ 7 ಗಂಟೆಗೆ ಶ್ರೀ ಶಾಖಾಂಬರಿ ದೇವಿಯವರಿಗೆ ಉಯ್ಯಾಲೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಪೂರ್ಣಗೊಳ್ಳಲಿದೆ.
ಎಲ್ಲಾ ಭಕ್ತಾದಿಗಳು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನವರ ಕೃಪಾಶೀರ್ವಾದ ಪಡೆಯಬೇಕಾಗಿ ಹಾಗೂ ಭಕ್ತಾಧಿಗಳು ಅನ್ನದಾನಕ್ಕೆ, ಅಕ್ಕಿ, ಬೆಲ್ಲ, ತುಪ್ಪ, ತೋಗರಿಬೆಳೆ. ತೆಂಗಿನಕಾಯಿ, ಕೊಬ್ಬರಿ ತರಕಾರಿ ದವಸದಾನ್ನಗಳು ಕೊಡಬಹುದು
ಎಂದು ಶ್ರೀ ಬನಶಂಕರಮ್ಮ ದೇವಾಲಯ ಭಾವಸಾರ ಕ್ಷತ್ರಿಯ ಮಂಡಲಿ ಚಾರಿಟಬಲ್ ಟ್ರಸ್ಟ್ (ರಿ) ಆಲೂರು ತಾಲ್ಲೂಕು, ಹಾಸನ ಜಿಲ್ಲೆ ಇವರು ತಿಳಿಸಿದ್ದಾರೆ.
