ಉಡುಪಿ ಜಿಲ್ಲೆಯ ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿ ಅವರು ಪ್ರತಿಷ್ಠಿತ “2024ರ ವೈದ್ಯಕೀಯ ಉದ್ಯಮಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವ ಜನವರಿ 26, 2025, ಚೆನ್ನೈಯಲ್ಲಿ ನಡೆಯಲಿರುವ ಗ್ಲೋಬಲ್ ಹೆಲ್ತ್‌ಕೇರ್ ಆಂಡ್ ವೆಲ್‌ನೆಸ್ ಅವಾರ್ಡ್ಸ್ ಆಂಡ್ ಕಾನ್ಫರೆನ್ಸ್‌ನಲ್ಲಿ ಪ್ರದಾನ ಮಾಡಲಾಗುವುದು.
ಜನವೈದ್ಯ ಸಂಸ್ಥೆಯ ಸಂಸ್ಥಾಪಕರಾದ ಡಾ. ಅಭಿತ್ ಅವರು, ವೈದ್ಯರ ಮನೆ ಭೇಟಿ ಸೇವೆ ಎಂಬ ನಾವೀನ್ಯತೆಯನ್ನು ಪರಿಚಯಿಸಿ, ಆರೋಗ್ಯ ಸೇವೆಯನ್ನು ಸುಲಭಗೊಳಿಸಲು ಮತ್ತು ಜನಸಾಮಾನ್ಯರ ಪಾಲಿಗೆ ತಲುಪುವಂತೆ ಮಾಡಲು ಮಹತ್ವದ ಪ್ರಯತ್ನಗಳನ್ನು ಮಾಡಿದ್ದಾರೆ.
ಇದು ಕಾರ್ಕಳ ಮತ್ತು ಉಡುಪಿ ಜಿಲ್ಲೆಗೆ ಹೆಮ್ಮೆ ತರುವ ಕ್ಷಣವಾಗಿದ್ದು, ಡಾ. ಅಭಿತ್ ಅವರ ಈ ಸಾಧನೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಇವರು ಮೂಲತಃ ಕಾರ್ಕಳ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು, ಭಾಸ್ಕರ ಶೆಟ್ಟಿ ಮತ್ತು ಅಮೃತ ಶೆಟ್ಟಿ ದಂಪತಿಯ ಪುತ್ರ. ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದು, ಸೇಥ್ ಜಿಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಎಂಡಿ ಸಮುದಾಯ ವೈದ್ಯಕೀಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.