ಬೈಲೂರು,: ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ಡಿ. 12ರಂದು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಸಂಘದಲ್ಲಿ 1018 ಮಂದಿ ಮತದಾರರಿದ್ದು 864 ಮಂದಿ ಮತದಾನ ಮಾಡಿದ್ದು 85 ಶೇ ಮತದಾನವಾಗಿದೆ
ಬಿಜೆಪಿ ಬೆಂಬಲಿಗರಾಗಿ ಸ್ಪರ್ಧಿಸಿದ್ದ 12 ಮಂದಿ ಸ್ಪರ್ಧಿಗಳು ವಿಜೇತರಾಗಿ ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯ ಕ್ಷೇತದಿಂದ ಸ್ಪರ್ಧಿಸಿದ್ದ ಉದಯ ಕುಮಾರ್ ಹೆಗ್ಡೆ 545,ಕಿಶನ್ 504, ಎನ್. ರವೀಂದ್ರ ನಾಯಕ್ 472,
ವಿನಯ ಕುಮಾರ್ ಶೆಟ್ಟಿ 497, ಎನ್.ವಿವೇಕಾನಂದ ಶೆಟ್ಟಿ 448, ಸುರೇಶ್ ಶೆಟ್ಟಿ 458, ಮಹಿಳಾ ಮೀಸಲು ಸ್ಥಾನದಿಂದ ವಿನೋದ ಪೂಜಾರ್ತಿ 430, ಶಾಂತ 407, ಹಿಂದುಳಿದ ಪ್ರವರ್ಗ ‘ಎ’ ಮೀಸಲು ಸ್ಥಾನದಿಂದ ದೇವೇಂದ್ರ ನಾಯಕ್ 425, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಸ್ಥಾನದಿಂದ ಶಾಂತರಾಮ ಶೆಟ್ಟಿ 460,
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಎನ್. ಬಿ. ಬಾಬು 486, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ
ಶಂಕರ ನಾಯ್ಕ್ 473 ಮತಗಳನ್ನು ಪಡೆದು ವಿಜೇತರಾಗಿದ್ದಾರೆ
ಆಡಳಿತ ಮಂಡಳಿಯ 12 ಸ್ಥಾನಕ್ಕೆ 30 ಮಂದಿ ಸ್ಪರ್ಧಿಗಳು ಸ್ಪರ್ಧಿಸಿದ್ದರು .ಸಾಮಾನ್ಯ ಕ್ಷೇತ್ರದಿಂದ 6ಸ್ಥಾನಕ್ಕೆ 15 ಮಂದಿ, ಮಹಿಳ ಕ್ಷೇತ್ರದಿಂದ 2ಸ್ಥಾನಕ್ಕೆ 5ಮಂದಿ, ಹಿಂದುಳಿದ ಪ್ರವರ್ಗ ‘ಎ’ 1ಸ್ಥಾನಕ್ಕೆ 3ಮಂದಿ, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು 1ಸ್ಥಾನಕ್ಕೆ 3ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಂದೊಂದು ಮೀಸಲು ಸ್ಥಾನಕ್ಕೆ 2ಮಂದಿ ಸ್ಪರ್ಧಿಗಳು ಸ್ಪರ್ಧಿಸಿದ್ದರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಉಪನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ದಿ ಅಧಿಕಾರಿ ಜಯಂತಿ ಕಾರ್ಯನಿರ್ವಹಿಸಿದ್ದರು.
ಶಾಸಕ ಸುನಿಲ್ ಕುಮಾರ್ ಭೇಟಿ
ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು