ಜಾರ್ಕಳ:ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ ಪರಿಕಲ್ಪನೆಯಡಿ ಸರಕಾರದ ಮೂಲಕ ಪಂಚಾಯತ್ ನ ಸಹಾಯೋಗದೊಂದಿಗೆ ಸಂಘ ಸಂಸ್ಥೆಗಳ ನಿರಂತರ ಸಹಕಾರದಿಂದ ಇಂದು ರಾಜ್ಯದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳು ಸ್ವಚ್ಛತೆಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಶಾಸಕರಾದ ವಿ ಸುನಿಲ್ ಕುಮಾರ್ ಹೇಳಿದರು.
ಫೆ 8 ರಂದು ಜಾರ್ಕಳದಲ್ಲಿ ನಡೆದ ಶಾಂತಿ ಯುವಕ ವೃಂದ ದ 43ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು
ಪ್ರತಿ ಗ್ರಾಮದಲ್ಲಿ ಯುವಕ ಸಂಘಗಳು ಸಕ್ರಿಯವಾ ಗಿದ್ದಾಗ ಹತ್ತಾರು ಚಟುವಟಿಕೆಗಳಿಗೆ ಹೊಸ ಚೈತನ್ಯ ಬರಲು ಸಾಧ್ಯ. ಯುವಕ ಸಂಘಗಳು ಕೇವಲ ನಾಟಕಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಹತ್ತಾರು ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಮುಸ್ತಫ್ ವಹಿಸಿದ್ದರು
ಜಾರ್ಕಳ ಲಕ್ಷ್ಮೀನಾರಾಯಣ ಸ್ಟೋನ್ ಡಿಸೈನರ್ ನ ನಾಗರಾಜ್ ತಂತ್ರಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಸಾಲಿಯನ್ ಮಾತನಾಡಿ ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಅಲ್ಲದೆ ಸಂಘದ ಸದಸ್ಯರು ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರದಲ್ಲಿ ಸಾಧನೆ ಮಾಡುವ ಮೂಲಕ ಸಂಘಕ್ಕೆ ಹೆಸರು ತಂದು ಕೊಟ್ಟಿದ್ದಾರೆ. ಸಂಘದ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರಿದರು.
ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರಾದ ಪ್ರಶಾಂತ್ ಕುಮಾರ್ ಗುತ್ತು ಮನೆ, ನೀರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸುರೇಂದ್ರ ಪೂಜಾರಿ, ಶಿಶಿರ ಶೆಟ್ಟಿ ಜಾರ್ಕಳ, ಪರ್ಕಳ ಅಧಿನಿಧಿ ಕನ್ಸ್ಟ್ರಕ್ಷನ್ ದಿನೇಶ್ ಕರ್ಕೇರ, ಜಾರ್ಕಳ ಉದ್ಯಮಿ ಸುರೇಶ್ ನಾಯಕ್, ಪಳ್ಳಿ ಗರಡಿ ಮನೆಯ ಸುಧಾಕರ ಪೂಜಾರಿ , ಜಾರ್ಕಳ ಉದ್ಯಮಿ ಲತೇಶ್ ಶೆಟ್ಟಿ, ಶಿಕ್ಷಕರಾದ ಉದಯ ಶೆಟ್ಟಿ ಸಂಘದ ಕಾರ್ಯದರ್ಶಿ ಸುಕುಮಾರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಂಘದ ಹಿರಿಯರಾದ ಭೋಜ ಪೂಜಾರಿ ವಿಠಲ ಮಡಿವಾಳರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ವಿದ್ಯಾರ್ಥಿಗಳಿಗೆ ಕಲಿಯುಕೆಯಲ್ಲಿ ಹಾಗೂ ಸಂಘದ ಸದಸ್ಯರಿಗೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಹರೀಶ್ ಆಚಾರ್ಯ ಸ್ವಾಗತಿಸಿದರು. ಆನಂದ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ರಾಮದಾಸ್ ಶೆಟ್ಟಿ ವಂದಿಸಿದರು. ಶೃತ ಕುಲಾಲ್ ನಿರೂಪಿಸಿದರು.