ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
13 ನಿರ್ದೇಶಕ ಸ್ಥಾನಗಳಿಗೆ ಅಶೋಕ್ ಕುಮಾರ್ ಬಲ್ಲಾಳ್, ನಾರಾಯಣ ನಾಯ್ಕ, ಮೋಹಿನಿ ಜೆ. ಸಾಲ್ಯಾನ್, ಸುದೀಪ್ ಶೆಟ್ಟಿ, ರಘುವೀರ್ ಎಂ. ಶೆಣೈ, ರವಿರಾಜ ಉಪಾಧ್ಯಾಯ, ಭೋಜ ಪೂಜಾರಿ, ಚಂದ್ರಶೇಖರ ಬಾಯರಿ ಕೆ., ಪಾಂಡುರಂಗ ಪ್ರಭು, ರಾಘವ ಶೆಟ್ಟಿ, ಬಾಬು, ಜಯಲಕ್ಷ್ಮೀ, ಕುಲದೀಪಕ್ ಸುವರ್ಣ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಚುನಾವಣಾ ಪ್ರಕ್ರಿಯೆ ನಡೆಸಿದರು. ಬ್ಯಾಂಕ್‌ನ ವ್ಯವಸ್ಥಾಪಕ ಪ್ರೀತನ್ ಡಿಸೋಜ ಹಾಗೂ ಸಿಬ್ಬಂದಿ ಸಹಕರಿಸಿದರು.