ಕಾರ್ಕಳ : ತಾಲೂಕಿನ ಸಾಣೂರು ಯುವಕ ಮಂಡಲದ 71ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ ಶ್ರೀ ವಾಣೀ ಯಕ್ಷಗಾನ ಸಭಾ ಯುವಕ ಮಂಡಲ (ರಿ.) ಸಾಣೂರು ಇದರ 54ನೇ ವಾರ್ಷಿಕೋತ್ಸವ ಸಂಭ್ರಮವು ಜ.18 ಶನಿವಾರ ಮತ್ತು ಜ.19 ರವಿವಾರದಂದು ಸಾಣೂರು ಪಠೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಜರಗಲಿದೆ.
ಜ. 18: ಬೆಳಿಗ್ಗೆ 8.15ಕ್ಕೆ ವಾರ್ಷಿಕೋತ್ಸವ ಸಂಭ್ರಮದ ಉದ್ಘಾಟನೆ, ಸಂಜೆ 6.00 ರಿಂದ ಸಾರ್ವಜನಿಕರಿಂದ ಮತ್ತು ಶಾಲಾ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮ ರಾತ್ರಿ 8.00ರಿಂದ ಸಭಾ ಕಾರ್ಯಕ್ರಮ, ಸಂಜೆ 9.30 ರಿಂದ ಮಂಡಲದ ಸದಸ್ಯರಿಂದ ಉಮೇಶ್ ಮಿಜಾರ್ ರಚಿಸಿರುವ ತುಳು ಹಾಸ್ಯಮಯ ನಾಟಕ ಉಲಾ ಪಿದಾಯಿ ನಡೆಯಲಿದೆ.
ಜ. 19 ರವಿವಾರ ಸಂಜೆ 6.00ರಿಂದ ವಾಣೀ ಯಕ್ಷಗಾನ ಸಭಾ ಯುವಕ ಮಂಡಲ ಸಾಣೂರು ಇದರ ಸದಸ್ಯರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಮಕರಾಕ್ಷ ಕಾಳಗ ಕನ್ನಡ ಪೌರಣಿಕ ಯಕ್ಷಗಾನ ನಡೆಯಲಿದೆ ಎಂದು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.