ನೂರಾಲ್ ಬೆಟ್ಟುವಿನ ಅಮೃತ್ ರಾಜ್ ಎಂಬವರ ಬೈಕ್ ಬಜಗೋಳಿಯಲ್ಲಿ ನಾಪತ್ತೆ ಆಗಿದೆ.
KA20HC6263 ನೇ TVS Star City ಬೈಕ್‌ನ್ನು ದಿನಾಂಕ 11.01.2025 ರಂದು ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ಚಿರಾಗ್ ಲಾಡ್ಜಿಂಗ್ ಎದುರುಗಡೆ ರಾತ್ರಿ 10:00 ಗಂಟೆಗೆ ನಿಲ್ಲಿಸಿ ಅದರ ಕೀಯನ್ನು ತೆಗೆಯಲು ಮರೆತು ಹೋಗಿದ್ದು, ಮರು ದಿನ ದಿನಾಂಕ 12.01.2025 ರಂದು ಬೆಳಿಗ್ಗೆ 7:00 ಗಂಟೆಗೆ ನೋಡಿದಾಗ ಬೈಕ್ ಅಲ್ಲಿಂದ ನಾಪತ್ತೆ ಆಗಿದೆ.
ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇದರ ಮೌಲ್ಯ 50,000/- ಆಗಬಹುದು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2025 ಕಲಂ: 303 (2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.