ಅಜೆಕಾರು: ಅಜೆಕಾರು ಗ್ರಾಮದ ಚೆರಿಯನ್ ಎಂಬವರ ಕೃಷಿ ತೋಟದ ಕೆಲಸಕ್ಕೆ ಬಂದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾನೆ.
ಜಾರ್ಖಂಡ್ ರಾಜ್ಯದ ಬರದಾ ಖುಂಠಿ ಗುಟುಹಾತು ಎಂಬಲ್ಲಿನ ನಿವಾಸಿ ಬಿಲ್ಕನ್ ಗುಡಿಯಾ(37) ಎಂಬುವವರು ಮಾ. 8 ರಂದು ರಾತ್ರಿ 1.30 ಗಂಟೆಗೆ ಬಂದು ರಾತ್ರಿ ಕೃಷಿ ಶೆಡ್ ನಲ್ಲಿ ಮಲಗಿ ಮಾ.09 ರಂದು ಬೆಳಿಗ್ಗೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇದುವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾನೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.