ಕಾರ್ಕಳ

ರೋಟರಿ ಕ್ಲಬ್ ವತಿಯಿಂದ ಕಾರ್ಕಳ ಜ್ಞಾನಸುಧಾದಲ್ಲಿ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಮಾಹಿತಿ

ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವಲಯ _ 4 ಮತ್ತು ರೋಟರಿ ಕ್ಲಬ್ ಕಾರ್ಕಳ ವಲಯ 5ರ ಜಂಟಿ ಆಶ್ರಯದಲ್ಲಿ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಕಾರ್ಯಗಾರವನ್ನು ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಇಂಟರ್‍ಯಾಕ್ಟ್ ಕ್ಲಬ್ಬಿನ ವತಿಯಿಂದ ಏರ್ಪಡಿಸಲಾಗಿತ್ತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಬಿ ಎಸ್ ಡಿ ಎಲ್ ಸೆಂಟ್ರಲ್ ಸಮಿತಿಯ ಸದಸ್ಯರಾದ ರೊಟೇರಿಯನ್ ಪಿ ಹೆಚ್‌ಎಫ್ ತಿಮ್ಮಪ್ಪ ಶೆಟ್ಟಿ ಆರೂರು ಅವರು ನಮ್ಮ ರಾಷ್ಟ್ರಧ್ವಜದ ಆರೋಹಣ, ಅವರೋಹಣ ಮತ್ತು ಶೋಕಾಚರಣೆಯ ಸಂದರ್ಭದಲ್ಲಿ ಅದನ್ನು ಬಳಸುವ ವಿಧಿ, ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಜೊತೆಗೆ ಹಾಳಾದ, ಹರಿದ ಧ್ವಜಗಳನ್ನು ಸಮರ್ಪಕವಾದ ರೀತಿಯಲ್ಲಿ ಗೌರವಯುತವಾಗಿ ವಿಲೇವಾರಿ ಮಾಡುವ ಕುರಿತು ತಿಳಿಸಿದರು.


ನಿಕಟಪೂರ್ವ ಜಿಲ್ಲಾ ಗೌವರ್ನರ್ ಆದ ಡಾ ಭರತೇಶ್ ಆದಿರಾಜ್ ಧ್ವಜದ ಬಗ್ಗೆ ಮಾಹಿತಿ ನೀಡುವ ಈ ರೀತಿಯ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಬೇಕು ಎಂದರು. ಮಣಿಪಾಲ್ ವಲಯ _ 4ರಆರ್ ಸಿ ಎಮ್ ಹೆಚ್ ಅಧ್ಯಕ್ಷೆಯಾದ ರೊಟೇರಿಯನ್ ಸುಪರ್ಣ ಶೆಟ್ಟಿಯವರು ನಮ್ಮ ತ್ರಿವರ್ಣಧ್ವಜ ಶೌರ್ಯ, ತ್ಯಾಗ, ಶಾಂತಿ, ಸತ್ಯ ಮತ್ತು ಸಮೃದ್ಧಿಯನ್ನು ಸೂಚಿಸುವ ಬಣ್ಣಗಳನ್ನು ಒಳಗೊಂಡಿದೆ ಎಂದರು.

ಭಾರತವು ವೈವಿಧ್ಯಮಯವಾದ ದೇಶ, ನಾವೆಲ್ಲರೂ ಒಟ್ಟಿಗೆ ದುಡಿದಾಗ ಭಾರತದ ಪ್ರಗತಿ ಸಾಧ್ಯ ಎಂದರು. ಕಾರ್ಕಳ ರೋಟರಿ ಕ್ಲಬ್ಬಿನ ನವೀನ್ ಶೆಟ್ಟಿ, ಉಡುಪಿ ಜಿಲ್ಲಾ ಭಾರತ ಸೇವಾದಳದ ಭಾರತಿ, ಇಂಟರ್‍ಯಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ಕುಮಾರಿ ವೈಷ್ಣವಿ ಶೆಟ್ಟಿಗಾರ್, ಕಾರ್ಯದರ್ಶಿ ಕುಮಾರಿ ನಂದಿತ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಟರ್‍ಯಾಕ್ಟ್ ಕ್ಲಬ್ಬಿನ ಸದಸ್ಯ ಪ್ರದ್ಯುಮ್ನ ಸ್ವಾಗತಿಸಿ, ಕಾರ್ಯದರ್ಶಿ ಕುಮಾರಿ ನಂದಿತಕಿಣಿ ವಂದಿಸಿದರು,
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ ಇ ಒ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು, ರೊಟೇರಿಯನ್ ಸುರೇಶ್ ರೈ, ವಲಯ- 5 ರ ರೊಟೇರಿಯನ್ ಗಣೇಶ್ ಸಾಲ್ಯಾನ್, ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೆ, ಅಕಾಡೆಮಿಕ್ ಅಡ್ವೈಸರ್ ಶ್ರೀಮತಿ ಶಾರದಾ ಅಂಬರೀಶ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಧ್ಯಾರ್ಥಿಗಳಿಂದ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆಂಗ್ಲಭಾಷಾ ಶಿಕ್ಷಕಿಯಾದ ಶ್ರೀಮತಿ ದಿವ್ಯಾ ಕೆ ನಿರೂಪಿಸಿದರು.

Related posts

ಮುದ್ರಾಡಿಯಲ್ಲಿ ರಾಮಾಯಣ, ಮಹಾಭಾರತ ಪರೀಕ್ಷೆಗಳ ಪ್ರಶಸ್ತಿ ಪತ್ರ ವಿತರಣೆ

Madhyama Bimba

ಹೆಬ್ರಿ: ಓಮ್ನಿ ಹಾಗೂ ಬೈಕ್ ಅಪಘಾತ- ಗಾಯ

Madhyama Bimba

ನಿಟ್ಟೆ ಬಳಿ ಕಾರು ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ: ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More