ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನವೀನ್ ಕೆ. ಅಡ್ಯಂತಾಯ ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಬೇಳಂಜೆ ಅವಿರೋಧ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ 10 ನಿರ್ದೇಶಕರು ಹಾಗೂ ಬಿಜೆಪಿ ಬೆಂಬಲಿತ ಈರ್ವರು ನಿರ್ದೇಶಕರುಗಳನ್ನು ಒಳಗೊಂಡಿದ್ದು, ನವೀನ್ ಕೆ. ಅಡ್ಯಂತಾಯ ಇವರನ್ನು ನೂತನ ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಬೇಳಂಜೆ ಇವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಚುನಾವಣಾ ಅಧಿಕಾರಿಯಾಗಿಯಾಗಿ ಸಹಕಾರ ಇಲಾಖೆಯ ಸುನಿಲ್ ಕುಮಾರ್ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.
ನಿರ್ದೇಶಕರುಗಳಾದ ಭೂತಗುಂಡಿ ಕರುಣಾಕರ ಶೆಟ್ಟಿ, ದಯಾನಂದ ಶೆಟ್ಟಿ, ಮಹೇಶ್ ಶೆಟ್ಟಿ, ದೇವು, ರಾಘವೇಂದ್ರ ನಾಯ್ಕ್, ಸುಧಾ ಜಿ. ನಾಯಕ್, ವೀಣಾ ಪ್ರಭು, ಅಮೃತ್ ಕುಮಾರ್ ಶೆಟ್ಟಿ, ಜಗನ್ನಾಥ ಕುಲಾಲ್, ಪುಟ್ಟಣ್ಣ ಭಟ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಜಯಂತ್ ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶೀನ ನಾಯ್ಕ್ ಪಕ್ಷದ ಮುಖಂಡರಾದ ಪ್ರವೀಣ್ ಬಲ್ಲಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಚಾರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯರು ಈ ಸಂದರ್ಭದಲ್ಲಿದ್ದರು.