ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಾರಾವಿ ಮೀಸಲು ಅರಣ್ಯದ ಒಳಗಡೆ ಹಾದುಹೋಗುವ ಪೂಂಜಾಜೆ -ಮಾಪಲ ಕಡೆ ಸಾಗುವ ಕಚ್ಛಾ ರಸ್ತೆಯಲ್ಲಿ ಕಾರ್ಕಳ ತಾಲೂಕು ನೂರಾಲ್‌ಬೆಟ್ಟು ಗ್ರಾಮದ ಮುಳಿಕಾರಪ್ಪ ಎಂಬಲ್ಲಿ ಭೇಟೆಯಾಡಲು ಬಂದ ಈರ್ವರನ್ನು ಅರಣ್ಯ ಇಲಾಖಾಧಿಕಾರಿಗಳು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ಫೆ. 02ರಂದು ನಡೆದಿದೆ.
ಪ್ರಶಾಂತ (41) ಹಾಗೂ ಅಶೋಕ್ (38) ಆರೋಪಿಗಳು.
ಪ್ರಶಾಂತ್ ತಮ್ಮ ಕಾರಿನಲ್ಲಿ ಲೋಡ್ ಮಾಡಿದ ಒಂಟಿ ನಳಿಕೆಗ ತೋಟೆ ಕೋವಿ -1, ಕಾಡತೂಸು -21, ದೊಡ್ಡ ಗಾತ್ರದ ಕಬ್ಬಿಣದ ಬಾಲ್ -1, ಕಪ್ಪು ಬಣ್ಣದ ಬಟ್ಟೆಚೀಲ-1, ತಿಳಿ ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ , ಪಡಿತರ ಚೀಟಿ -1 ಒಪ್ಪೋ ಕಂಪೆನಿಯ ಮೊಬೈಲ್ ಫೋನ್ -1 ರೇಷನ್ ಕಾರ್ಡ್ -1 ಮತ್ತು ಕಪ್ಪು ಬಣ್ಣದ ಹೆಡ್ ಲೈಟ್ 1 ನ್ನು ಇಟ್ಟುಕೊಂಡು ಮತ್ತೋರ್ವ ಆರೋಪಿಯಾದ ಅಶೋಕ (38) ಇತನು ಅಟೋ ರಿಕ್ಷಾದಲ್ಲಿ ಒಪ್ಪೋ ಕಂಪೆನಿಯ ಮೊಬೈಲ್ ಫೋನ್ -1 ನ್ನು ಹೊಂದಿ ಅಕ್ರಮ ಬೇಟೆ ಮಾಡುವ ಉದ್ದೇಶದಿಂದ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ, ಕಾರ್ಕಳ ವನ್ಯಜೀವಿ ವಲಯ ಇವರು ಹಾಗೂ ಸಿಬ್ಬಂದಿಯವರು ಪತ್ತೆ ಮಾಡಿ ಅಪಾದಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ, ಸೊತ್ತುಗಳನ್ನು ಸ್ವಾಧೀನಪಡಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.