ಆವರಣ ಇಲ್ಲದ ಬಾವಿಯೊಳಗೆ ದನಗಳು ಬಿದ್ದು ಪ್ರಾಣ ಕಳೆದು ಕೊಂಡ ಘಟನೆ ವರದಿಯಾಗಿದೆ.
ಮಿಯ್ಯಾರಿನ ಜೋಡು ಕಟ್ಟೆ ಯ ವಾಲ್ಟರ್ ಡಿ ಸೋಜ ಎಂಬವರಿಗೆ ಸೇರಿದ ಮಿಯ್ಯಾರು ಚರ್ಚ್ ಬಳಿ ಇರುವ ಖಾಸಗಿ ಸ್ಥಳದಲ್ಲಿ ಆವರಣ ಇಲ್ಲದ ಬಾವಿಯೊಂದಿದೆ.
ಈ ಬಾವಿಗೆ ಹಂತ ಹಂತವಾಗಿ ದನಗಳು ಬೀಳುತ್ತಿದ್ದು ಸ್ಥಳೀಯರ ಗಮನಕ್ಕೆ ಬಂದಿರಲಿಲ್ಲ.
ಈ ಪರಿಸರದ ದಾಮೋದರ ಆಚಾರ್ಯ ಹಾಗು ಇಬ್ರಾಹಿಂ ಎಂಬವರು ತಮ್ಮ ದನ ಕಾಣೆಯಾದುದನ್ನು ಕಂಡು ಎಲ್ಲಾ ಕಡೆ ಹುಡುಕಾಟ ಮಾಡಿದ್ದಾರೆ. ಆದರೆ ದನಗಳು ಸಿಕ್ಕಿಲ್ಲ.
ಆದರೆ ಸ್ಥಳೀಯ ಪರಿಸರದಲ್ಲಿ ಕೆಟ್ಟ ವಾಸನೆ ಹರಡಲು ಆರಂಭಿಸಿದಾಗ ದನಗಳು ಸತ್ತು ಹೋಗಿರುವುದು ಕಂಡು ಬಂತು ಎಂದು ತಿಳಿದು ಬಂದಿದೆ
