ಕಾರ್ಕಳ ಪರ್ಪಲೆ ಗುಡ್ಡಕ್ಕೆ ಬಿದ್ದ ಬೆಂಕಿಯನ್ನು ನಂದಿಸಲಾಗಿದೆ.
ಇಂದು ಸಾಯಂಕಾಲ ಸುಮಾರು 4 ಗಂಟೆಗೆ ಪರ್ಪಲೆ ಗುಡ್ಡದಲ್ಲಿ ಬೆಂಕಿ ಬಿದ್ದಿತ್ತು. ಬೆಂಕಿಯ ಜ್ವಾಲೆಗೆ ಅಲ್ಲಿನ ನಿಟ್ಟೆ ಗ್ರಾಮ ಪಂಚಾಯತ್ ಗೆ ಒಳ ಪಟ್ಟ ಬೋರ್ ವೆಲ್ ನ ಪೈಪ್ ಗಳು ಸುಟ್ಟು ಹೋದವು.
ಬೆಂಕಿ ಹತ್ತಿದ ಸಂದರ್ಭದಲ್ಲಿ ಆ ಹಾದಿಯಾಗಿ ಹೋಗುತ್ತಿದ್ದ ಮಾಧ್ಯಮ ಬಿಂಬ ಹಾಗು ಸ್ವಯಂ ಟೈಮ್ಸ್ ನ ವಸಂತ್ ಕುಮಾರ್, ಶಶಿಕಾಂತ್ ಬೈಲೂರು, ಸುಬ್ರಹ್ಮಣ್ಯ ರವರು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ ಗಾಳಿ ಜೋರಾದುದರಿಂದ ಬೆಂಕಿ ಹೆಚ್ಚುತ್ತ ಸಾಗಿತು.
ಬಳಿಕ ಈ ಬಗ್ಗೆ ಮಾಹಿತಿಯನ್ನು ಪರ್ಪಲೆ ಅತ್ತೂರು ಕೃಷ್ಣ ಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಸುಭಾಸ್ ಚಂದ್ರ ಹೆಗ್ಡೆ, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್,ಅಭಿವೃದ್ಧಿ ಅಧಿಕಾರಿ ಆನಂದ ವಾರ್ತಿ ಯವರ ಗಮನಕ್ಕೆ ತರಲಾಯಿತು.
ಬಳಿಕ ಕೆಲವೇ ಹೊತ್ತಿನಲ್ಲಿ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಸುಮಾರು 1 ಎಕ್ರೆ ಯಷ್ಟು ಜಾಗ ಬೆಂಕಿಗೆ ಅಹುತಿಯಾಗಿದೆ.
ಅಗ್ನಿ ಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರ ಶೇಖರ್, ಸಿಬ್ಬಂದಿ ಗಳಾದ ಗಣೇಶ್, ಹಸನ್, ಮುಜಾಬಿನ್, ಭೀಮಪ್ಪ, ಬಸವರಾಜ್ ಪಾಟೀಲ್ ಬೆಂಕಿ ನಂದಿಸುವ
ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು








