ಕಾರ್ಕಳ: ಅಯ್ಯಪ್ಪನಗರ ಜಂಕ್ಷನ್‌ನಲ್ಲಿ ಪಾ ದಾಚಾರಿಯೊರ್ವರಿಗೆ ಓಮ್ನಿ ಡಿಕ್ಕಿಯಾಗಿ ಒಮ್ನಿಯೊಂದಿಗೆ ಚಾಲಕ ಪರಾರಿಯಾದ ಘಟನೆ ಇಂದು(ಜ.24) ಸಂಜೆ ಸುಮಾರು 7 ಗಂಟೆಗೆ ನಡೆದಿದೆ
ತಮಿಳುನಾಡು ಮೂಲದ ವ್ಯಕ್ತಿ ಗಂಭೀರ ಗಾಯಗೊಂಡವರು.
ಕಾರ್ಕಳ ಉಡುಪಿ ಮುಖ್ಯ ರಸ್ತೆಯ ಅಯ್ಯಪ್ಪನಗರ ಜಂಕ್ಷನ್ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರ್ಕಳದಿಂದ ಉಡುಪಿ ಕಡೆಗೆ ಹೋಗುತಿದ್ದ ಒಮ್ನಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಪಾದಾಚಾರಿಗೆ ಡಿಕ್ಕಿ ಹೊಡೆದು ಒಮ್ನಿಯೊಂದಿಗೆ ಪರಾರಿಯಾಗಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಪರಾರಿಯಾದ ಓಮ್ನಿಯನ್ನು ಹಿಂಬಲಿಕೊಂಡು ಹೋಗಿ ಬೈಲೂರಿನಲ್ಲಿ ತಡೆದು ಘಟನೆ ನಡೆದ ಸ್ಥಳಕ್ಕೆ ಚಾಲಕ ಹಾಗೂ ಒಮ್ನಿಯನ್ನು ಕರೆತಂದರು.
ಒಮ್ನಿ ಚಾಲಕ ಆತ್ರಾಡಿ ಮೂಲದ ನಿವೃತ್ತ ಶಿಕ್ಷಕರು ಎನ್ನಲಾಗಿದೆ .
ಅಪಘಾತವಾದ ವ್ಯಕ್ತಿಗೆ ತಲೆಗೆ ತೀವೃ ಸ್ವರೂಪದ ಪೆಟ್ಟಾಗಿದ್ದು ಕೈ ಕಾಲಿಗೆ ಗಾಯವಾಗಿದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ
previous post