ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘ ಇದರ ನೂತನ ಅಧ್ಯಕ್ಷರಾಗಿ ಮಾಪಾಲು ಜಯವರ್ಮ ಜೈನ್ ಆಯ್ಕೆ ಆಗಿದ್ದಾರೆ.
ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗುವ ಮೂಲಕ ಸಹಕಾರಿ ರಂಗದಲ್ಲಿ ಎಲ್ಲರೊಂದಿಗೂ ಸಹಕಾರ ಮನೋಭಾವದಿಂದ ಬೆರೆಯುವ ಇವರು 6 ನೇ ಬಾರಿಗೆ ಈ ಸಹಕಾರಿ ಸಂಘದ ನಿರ್ದೇಶಕರಾಗಿರುವ ಅನುಭವಿ. ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಂಘದ ಸಿಬ್ಬಂದಿಗಳ ಸತತ ಪ್ರಯತ್ನದೊಂದಿಗೆ ನಿರಂತರ ಪ್ರಯತ್ನ ಪಟ್ಟಿದ್ದಾರೆ.
ಇನ್ನೊಂದು ಬಾರಿಗೆ ಈ.ಸಹಕಾರಿ ರಂಗಕ್ಕೆ ಇವರ ಆಯ್ಕೆ ಆಗಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ.
ಉಪಾಧ್ಯಕ್ಷರಾಗಿ ಉದಯ ಪೂಜಾರಿ ಆಯ್ಕೆ ಮಾಡಲಾಗಿದೆ. ಇವರು ನೆಲ್ಲಿಕಾರು ಗ್ರಾಮ ಪಂಚಾಯತದ ಅಧ್ಯಕ್ಷರಾಗಿದ್ದಾರೆ