ಮೂಡುಬಿದಿರೆ

ದರೆಗುಡ್ಡೆ: ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಾದ ಪಂಚಾಯತ್‌ದ ನೂತನ ಕಟ್ಟಡದಲ್ಲಿ ನವೀಕೃತ ಕೊಠಡಿ, ದರೆಗುಡ್ಡೆಯ ರೂ. 20ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಕೆಲ್ಲಪುತ್ತಿಗೆಯಲ್ಲಿ ವಿವೇಕ ಶಾಲಾ ಕೊಠಡಿ, ಆದಿವಾಸಿ ಕೊರಗ ಸಮುದಾಯದ 18ಲಕ್ಷದ ಸಮುದಾಯ ಭವನ, ರೂ. 5ಲಕ್ಷ ವೆಚ್ಚದ ಸೋಲಾರ್ ಲೈಟ್ ಕಾಮಗಾರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

 


ನಂತರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು ಪಂಚಾಯತು ವ್ಯಾಪ್ತಿಯಲ್ಲಿ ಸುಮಾರು 15ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ತನ್ನ ಶಾಸಕತ್ವದಲ್ಲಿ ಒದಗಿಸಲಾಗಿದೆ. ಪಣಪಿಲದಲ್ಲಿ ಅಕಾಲಿಕ ಮಳೆಗೆ ಕೊಚ್ಚಿ ಹೋದ ಸೇತುವೆ ನಿರ್ಮಾಣಕ್ಕೆ 50ಲಕ್ಷ ರೂಪಾಯಿ, ಇಟಲ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯ ಪೂರಕವಾಗಿ ದೇವಳದ ರಸ್ತೆ ಅಭಿವೃದ್ಧಿಗೆ 50ಲಕ್ಷ ರೂ. ಅನುದಾನ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.


ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸಿದಾಗ ಜನಪರವಾಗಿ ಬೆಳೆಯಲು ಸಾಧ್ಯ ಎಂದರು.

ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಸಭಾಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ಉಪಾಧ್ಯಕ್ಷರಾದ ನಳಿನಿ, ಸದಸ್ಯರಾದ ಮುನಿರಾಜ ಹೆಗ್ಡೆ, ತುಳಸಿ ಮೂಲ್ಯ, ಸುಭಾಶ್ಚಂದ್ರ ಚೌಟ, ದೀಕ್ಷಿತ್ ಪಣಪಿಲ, ಸಂತೋಷ್ ಪೂಜಾರಿ, ಪ್ರಸಾದ್ ಕುಮಾರ್, ಶಾಲಿನಿ, ಶಶಿಕಲಾ, ಜನಿತಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಪಿ. ಜಗದೀಶ ಅಧಿಕಾರಿ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು, ಕಾರ್ಯದರ್ಶಿ ಸತ್ಯಭಾಮ, ಶಾಲಾ ಮುಖ್ಯೋಪಾಧ್ಯಾಯ ಡಿಚಾರ್ಡ್ ಡಿಕೋಸ್ತ, ಕೆಲ್ಲಪುತ್ತಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಂದ್ರ ಕೋಟ್ಯಾನ್, ವಜ್ರನಾಭ ಹೆಗ್ಡೆ ದೊಡ್ಡಮನೆ, ಗುತ್ತಿಗೆದಾರ ಪ್ರಶಾಂತ್ ಎಸ್. ಅಮೀನ್, ಅಂಗನವಾಡಿ ಮೇಲ್ವಿಚಾರಕಿ ಶುಭಾ, ಕಾತ್ಯಾಯಿನಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ಕೆ. ಕರಿಯ, ಕರಾವಳಿ ಕೇಸರಿ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ, ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ದರೆಗುಡ್ಡೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಕುಮಾರ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಕುಸುಮಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲ ರಾವ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಶಿಕ್ಷಕಿ ರಮಣಿ ಬಿ., ಶ್ರೀಮತಿ, ಸಹಾಯಕಿಯರಾದ ವೆಲಂಟೈನ್ ಡಿಕುನ್ಹ, ಲಲಿತಾ, ಪದೋನ್ನತಿಗೊಂಡ ವಲಯ ಮೇಲ್ವಿಚಾರಕಿ ಶುಭ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಗಳಿಗೆ ಸಹಕರಿಸುತ್ತಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Related posts

ಶ್ರೀ ಕ್ಷೇತ್ರಕ್ಕೆ ಇಟ್ಟಲಕ್ಕೆ ಸಾಧ್ವೀ ಸರಸ್ವತಿ ಭೇಟಿ

Madhyama Bimba

ಅಂತಾರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮೂಲ್ಕಿ ಅವರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ, ಕಂಬಳ ಮ್ಯೂಸಿಯಂ- ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್

Madhyama Bimba

ನಾರಾವಿಯಲ್ಲಿ ಸಂತ ಸಮಾಗಮ- ಲೋಕ ಕಲ್ಯಾಣಾರ್ಥ ನಾರಾವಿ ಮಹಾ ಚಂಡಿಕಾ ಯಾಗ – ಕರಾವಳಿಯ ಪರಮ ಪೂಜ್ಯ ನವ ಯತಿವರೇಣ್ಯರ ದಿವ್ಯ ಉಪಸ್ಥಿತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More