ಕಾರ್ಕಳ

ಬೋಳ ಪಿಲಿಯೂರು ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೋಳ ಪಿಲಿಯೂರು ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಿತ್ರವೃಂದ(ರಿ.), ಬರಬೈಲು ಇವುಗಳ ಜಂಟಿ ಆಶ್ರಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಶಾಲಾ ಭವ್ಯ ರಂಗ ವೇದಿಕೆಯಲ್ಲಿ ನಡೆಯಿತು.


ಅಂದು ಪೂರ್ವಾಹ್ನ ಬೋಳ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಇವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ಥಳೀಯ ಪಂಚಾಯತ್ ಪ್ರತಿನಿಧಿ ಶಿವರಾಮ್ ಆಚಾರ್ಯ, ವಿದ್ಯಾರ್ಥಿ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೂರ್ವ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ವರ್ಧೆ ಏರ್ಪಡಿಸಲಾಯಿತು.

ಸಂಜೆ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಉದ್ಯಮಿ, ದಂತವೈದ್ಯೆ ಶ್ರೀಮತಿ ಡಾ| ಅಕ್ಷತಾ ರೈ ವಹಿಸಿದ್ದರು.


ಮುಖ್ಯ ಅತಿಥಿಯಾದ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಶ್ಯಾಮ್ ಸುಂದರ್ ಎಂ. ಕನ್ನಡ ಮಾಧ್ಯಮ ಶಾಲೆಯ ಬೆಳವಣಿಗೆ ಹಾಗೂ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.


ಸಮಾರಂಭದಲ್ಲಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ದಿನೇಶ್ ಪೂಜಾರಿ, ಬೋಳ ವಿಠಲ ಶೆಟ್ಟಿ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ಸುನಿಲ್ ಶೆಟ್ಟಿ, ಗ್ರಾಮ ಕರಣಿಕರಾದ ಚೈತನ್ಯದ ಚಿಲುಮೆ ಸುದರ್ಶನ್ ಕಾಮತ್, ಬೆಂಗಳೂರಿನ ವೈಟ್ ಎಂಡ್ ವೈಟ್ ಇದರ ಕಾಪು ವಿಭಾಗದ ಮ್ಯಾನೇಜರ್ ಸುಧೀರ್ ದೇವಾಡಿಗ, ಸುಕುಮಾರ್ ಶೆಟ್ಟಿ, ಬೋಳ ಪರಾರಿ, ಶಾಲಾ ಹಿರಿಯ ವಿದ್ಯಾರ್ಥಿ ಬಿ. ಪ್ರಕಾಶ್, ನಿವೃತ್ತ ಮುಖ್ಯ ಶಿಕ್ಷಕ ಹೂವಪ್ಪ ಮಾಸ್ಟರ್, ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ನ ಬೋಳ ದಾಮೋದರ ಕಾಮತ್, ಮುಂಬೈ ಉದ್ಯಮಿಗಳಾಗಿರುವ ಸದಾಶಿವ ಶೆಟ್ಟಿ ತಟ್ಟದ ಬೈಲು, ಬೋಳ, ಪ್ರದೀಪ್ ಶೆಟ್ಟಿ ಕೆದಿಂಜೆ ಕೂಟಾಯಿ, ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಬಿ. ಕೃಷ್ಣಮೂರ್ತಿ, ಶ್ರೀಮತಿ ಸುಜಾತಾ ಶೇಖರ್ ಶೆಟ್ಟಿ, ಸವಿತಾ ನಿವಾಸ, ಬೋಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ದಿ ಚಟುವಟಿಕೆಗಳಲ್ಲಿ ನಿರಂತರ ಸಹಕರಿಸುತ್ತಿರುವ ದಾನಿಗಳನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು. ಕಲಿಕೆ ಹಾಗೂ ಆಟೋಟ ಸ್ವರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಶಿಕ್ಷಕರಾಗಿ ಆದರ್ಶ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ನಿವೃತ್ತಿ ಹೊಂದಿದ ನಂತರವೂ ತಾನು ಕಲಿತ/ಕಲಿಸಿದ ಶಾಲೆಯ ಮೇಲಿನ ಅಭಿಮಾನದಿಂದ ಹಲವು ವರ್ಷ ನಿಸ್ವಾರ್ಥ ಸೇವೆ ಸಲ್ಲಿಸಿದ ಹಾಗೂ ಶಾಲೆಯ ಬೆಳವಣಿಗೆಗೆ ತನ್ನಿಂದ ಸಾಧ್ಯವಾದ ಸೇವೆ ಸಲ್ಲಿಸುತ್ತಿರುವ ಜನಾನುರಾಗಿ ಶಿಕ್ಷಕ ಕೆ. ವಿಷ್ಣುಮೂರ್ತಿ ರಾವ್ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್ ಕುಮಾರ್ ಕೆಮ್ಮಣ್ಣು ಇವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಹಾಗೂ ಇತ್ತೀಚೆಗೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ಗೌರವಾದರ ಪೂರ್ವಕವಾಗಿ ಅಭಿನಂದಿಸಲಾಯಿತು.

ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ. ಜಯರಾಮ ಶೆಟ್ಟಿ, ಕೋಶಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಮಿತ್ರವೃಂದ (ರಿ) ಬರಬೈಲು ಇದರ ಅಧ್ಯಕ್ಷ ಸುಪ್ರೀತ್ ಶೆಟ್ಟಿ ಹಾಗೂ ಕಾರ್ಯದರ್ಶಿ ಬಿ. ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಪ್ರಭಾರ ಮುಖ್ಯೋಪಾಧ್ಯಾಯರಾದ ಪುಂಡಲೀಕ ಎಸ್. ಪವಾರ್ ಸ್ವಾಗತಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಹಿರಿಯ ಗೌರವ ಶಿಕ್ಷಕಿ ಶ್ರೀಮತಿ ಗೀತಾ ದೇವಾಡಿಗ ವರದಿ ಮಂಡಿಸಿ, ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಶಶಿಕಲಾ ವಿಜೇತರ ಪಟ್ಟಿ ವಾಚಿಸಿದರು. ಇನ್ನೋರ್ವ ಗೌರವ ಶಿಕ್ಷಕಿ ಶ್ರೀಮತಿ ಜ್ಯೋತಿ ದುರ್ಗೇಶ್ ಪೂಜಾರಿ ಪುರಸ್ಕೃತರ ಪಟ್ಟಿ ವಾಚಿಸಿದರು. ಹಳೆ ವಿದ್ಯಾರ್ಥಿ, ದೈಹಿಕ ಶಿಕ್ಷಕಿ ಶ್ರೀಮತಿ ಶಶಿಕಲಾ ಸಪಳಿಗ ಹಳೆ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು.
ಹಿರಿಯ ವಿದ್ಯಾರ್ಥಿಸತೀಶ್ ಶೆಟ್ಟಿ ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ವಂದಿಸಿದರು. ಗೌರವ ಶಿಕ್ಷಕಿಯರಾದ ಶ್ರೀಮತಿ ದೀಪಾ, ಕುಮಾರಿ ಸ್ವಾತಿ ಹಾಗೂ ಪೂರ್ವ ವಿದ್ಯಾರ್ಥಿಗಳಾದ ತಾರಾನಾಥ್ ಬೋಳ, ಚಂದ್ರಹಾಸ್ ಪುತ್ರನ್, ಶ್ರೀಮತಿ ಪ್ರಮೀಳ ಸತೀಶ್ ಶೆಟ್ಟಿ, ಶ್ರೀಮತಿ ಪ್ರತೀಕ್ಷಾ ವಜ್ರೇಶ್ ಮಾಡ, ಶ್ರೀಮತಿ ಸಂಗೀತಾ ಶರತ್ ಶೆಟ್ಟಿ, ರಘುನಾಥ್ ಪುತ್ರನ್ ಹಾಗೂ ಶ್ರೀಮತಿ ಶ್ರೀಷಾ ಪವನ್ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಸೂರಜ್ ಕುಲಾಲ್ ಮತ್ತು ಕೇಶವ ಆಚಾರ್ಯ ನಿರ್ದೇಶನದಲ್ಲಿ ಗರ್ವಭಂಗ ಯಕ್ಷಗಾನ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಬರವುದ ಬೊಳ್ಳಿ ರಾಜೇಶ್ ಆಚಾರ್ಯ ಪರ್ಕಳ ವಿರಚಿತ “ಆಲ್ ಎನ್ನಾಲ್” ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

 

Related posts

ಬೆಳ್ಮಣ್ ಚರ್ಚ್ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ನೂತನ ಒಪಿಡಿ, ಲೇಬರ್ ಥಿಯೇಟರ್ (ಹೆರಿಗೆ ಕೊಠಡಿ) ಕಾಂಪ್ಲೆಕ್ಸ್‌ಗೆ ಶಂಕುಸ್ಥಾಪನೆ

Madhyama Bimba

ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More