ಕಳೆದ ಹದಿನೈದು ವರ್ಷಗಳಿಂದ ತೋಡಾರಿನಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಸ್ಪಟಿಕ ಮಹೋತ್ಸವ ಹಾಗೂ ಸನದುದಾನ ಸಮ್ಮೇಳನವು ಫೆ.8 ಹಾಗೂ 9 ರಂದು ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರಾದ ಬಿ.ಎಂ.ಇಸ್ಹಾಕ್ ಹಾಜಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ ಶಂಸುಲ್ ಉಲಮಾ ಅರೆಬಿಕ್ ಕಾಲೇಜು 2010 ರಲ್ಲಿ ಪ್ರಾರಂಭಗೊಂಡಿದ್ದು ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳುಲ್ಲ ಯುವಪೀಳಿಗೆಯನ್ನು ಸಮಾಜಕ್ಕೆ ಸಮರ್ಪಿಸುವ ಧ್ಯೇಯದೊಂದಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನೂ ನೀಡಿ ಗಮನಾರ್ಹ ಸಾಧನೆಗಳನ್ನು ಮಾಡಿಕೊಂಡು ಬಂದಿದೆ. ಇದರ ಹೊರತಾಗಿ ಎರಡು ಅಂತರಾಷ್ಟ್ರೀಯ ಹಾಗೂ ಎರಡು ಅಂತರಾಜ್ಯ ಭಾಷೆ ಮತ್ತು ನಮ್ಮ ಪ್ರಾದೇಶಿಕ ಭಾಷಾ ಜ್ಞಾನ ನೀಡುತ್ತಾ ಬಂದಿದೆ, ಪಂಚ ಭಾಷೆಗಳಲ್ಲಿ ಪಳಗಿದ ಹಾಗೂ ಸಮಾಜದ ನಾಡಿಮಿಡಿತವನ್ನರಿತು ಸಮಾಜದ ಉನ್ನತಿಗೆ ಶ್ರಮಿಸುವ 100 ರಷ್ಟು ಮ ಅಬರಿ ಪಂಡಿತರನ್ನು ಸಮಾಜಕ್ಕೆ ನಮ್ಮ ಸಂಸ್ಥೆ ನೀಡಿದೆ ಎಂದರು.
ಈಬಾರಿ 12 ಮಂದಿ ವಿದ್ಯಾರ್ಥಿಗಳಿಗೆ ಸನದುದಾನ ( ಪದವಿ ಪ್ರದಾನ) ನೀಡಲಿದ್ದು ಇದು ಐದನೆಯ ಸನದುದಾನವಾಗಿದೆ ಎಂದರು.
ಫೆ.9 ರಂದು ಮಗರಿಬ್ ನಮಾಝ್ ಬಳಿಕ ನಡೆಯಲಿರುವ ಸ್ಪಟಿಕ ಮಹೋತ್ಸವದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಕೋಯ ತಂಙಳ್ ಅವರು ಸನದುದಾನ ಹಾಗೂ ಪ್ರಭಾಷಣ ಮಾಡಲಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ: ಕೆ.ಆಲಿಕುಟ್ಟಿ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ದ.ಕ.ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರು ಉದ್ಘಾಟಿಸಲಿದ್ದಾರೆ.
ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷರಾದ ಶೈಖುನಾ ಯು.ಎಂ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ದುವಾ ನೆರವೇರಿಸಲಿದ್ದಾರೆ.
ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ,ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ,ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮುಂತಾದ ನೇತಾರರು ಭಾಗವಹಿಸಲಿದ್ದು ಕಾಲೇಜಿನ ಪ್ರಾಂಶುಪಾಲರಾದ ರಫೀಕ್ ಅಹ್ಮದ್ ಹುದವಿ ಕೋಲಾರಿ ಸ್ವಾಗತಿಸಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಇನಾಯತ್ ಆಲಿ ಮುಲ್ಕಿ,ಮೊಯ್ದಿನ್ ಹಾಜಿ ಅಡ್ಡೂರು,ಅಬ್ದುಲ್ ಲತೀಫ್ ಗುರುಪುರ, ಎಂ.ರಿಝ್ವಾನ್ ಬಪ್ಪನಾಡು,ಮುಹಮ್ಮದ್ ಸಲೀಂ ಮೂಡುಬಿದಿರೆ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅಬ್ದುಲ್ ಲತೀಫ್ ಹಾಜಿ ಬೆಂಗಳೂರು ಅವರಿಗೆ ಶಂಸುಲ್ ಉಲಮಾ ಅವಾರ್ಡ್ ನೀಡಿ ಗೌರವಿಸಲಾಗುವುದೆಂದು ಹೇಳಿದ ಅವರು ಬಳಿಕ ಅಂತರರಾಷ್ಟ್ರೀಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದರು.
ಫೆ.8 ರಂದು ಅಸರ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ತೋಡಾರು ಮಖಾಂ ಝಿಯಾರತ್ ನಡೆಸಲಿದ್ದು ತೋಡಾರು ಮಸೀದಿಯ ಬದ್ರಿಯಾ ಸುನ್ನೀ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎಂ.ಎ.ಎಸ್.ಆಸಿಫ್ ಇಕ್ಬಾಲ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮಗ್ರಿಬ್ ನಮಾಝ್ ಬಳಿಕ ಕುಕ್ಕಾಜೆ ತಂಙಳ್ ಅವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷರಾದ ಬಿ.ಎಂ.ಕೆ.ಮುಹಿಯುದ್ದೀನ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ವಾರ್ಷಿಕ ಸಂಗಮ ಕಾರ್ಯಕ್ರಮವನ್ನು ಸಯ್ಯಿದ್ ಅಲೀ ತಂಙಳ್ ಅವರು ಉದ್ಘಾಟಿಸಲಿದ್ದು ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ,ಸಯ್ಯಿದ್ ಅಕ್ರಮ್ ಅಲೀ ತಂಙಳ್ ಅಂಗರಕರ್ಯ,ಇರ್ಷಾದ್ ದಾರಿಮಿ ಮಿತ್ತಬೈಲ್, ಐ.ಕೆ.ಮೂಸಾ ದಾರಿಮಿ ಕಕ್ಕಿಂಜೆ ಮುಂತಾದ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ , ಬಳಿಕ ಅಬ್ದುಲ್ ರಝಾಕ್ ಅಬ್ರಾರಿ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದು ಇಸ್ಹಾಕ್ ಹಾಜಿ ಮಾಹಿತಿ ನೀಡಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮದನಿ ಮೂಡುಬಿದಿರೆ,ಪದಾಧಿಕಾರಿಗಳಾದ ಹಿದಾಯತ್ ಹೊಸ್ಮನೆ,ಅಶ್ರಫ್ ಹಾಜಿ, ಇಲ್ಯಾಸ್ ತೋಡಾರು, ಬಾವಾ ಮುಹಿಯುದ್ದೀನ್ ಹಾಜಿ,ಖಲಂದರ್ ಫೈಝಿ ಅಲ್ ಮ ಅಬರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.