ನಕ್ರೆ ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವ ಫೆ. 6ರಂದು ನಡೆಯಿತು.
ಉಡುಪಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಫೆ. 6ರಂದು ರುದ್ರಾಭಿಷೇಕ, ಮಧ್ಯಾಹ್ನ ಶ್ರೀ ದೇವರ ರಥಾರೋಹಣ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ಶ್ರೀ ಮಹಾ ರಥೋತ್ಸವ ನಡೆಯಿತು. ಫೆ. 7 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ದೈವಗಳ ನೇಮ, ಕಟ್ಟೆಪೂಜೆ ನಡೆಯಿತು.