ದಿ ಗ್ರೇಟ್ ಮರಾಠಾಸ್ ಕಾರ್ಕಳ ಇವರ ಆಶ್ರಯದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು, ಶಿವಮೊಗ್ಗ ಚಿಕ್ಕಮಂಗಳೂರು ಜಿಲ್ಲೆಯ ಮರಾಠ ಸಮಾಜ ಬಂಧುಗಳ ಓವರ್ ಆರ್ಮ್ ಕ್ರಿಕೆಟ್ ಹಾಗೂ ಥ್ರೋ ಬಾಲ್ ಮತ್ತು 15 ವರ್ಷದ ಒಳಗಿನ ಮಕ್ಕಳಿಗೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಕಾರ್ಕಳ ತಾಲೂಕು ಸ್ವರಾಜ್ ಮೈದಾನ, ಗಾಂಧಿ ಮೈದಾನ ಹಾಗೂ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಫೆ. 1 ಮತ್ತು 2ರಂದು ಜರುಗಿತು.
ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜರ ವೇದಿಕೆಯ ಉದ್ಘಾಟನೆಯನ್ನು ಕಾರ್ಕಳ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಟ್ಟು ಉದ್ಘಾಟಿಸಿ ಮಾತನಾಡಿ 5 ಜಿಲ್ಲೆಯ ಮರಾಠ ಸಮುದಾಯದ ಜನತೆಯನ್ನು ಒಗ್ಗೂಡಿಸಿಕೊಂಡು ಕಾರ್ಕಳದಲ್ಲಿ ಕ್ರೀಡಾಕೂಟ ಆಯೋಜಿಸುವುದು ಅತ್ಯಂತ ಸಂತಸ ತಂದಿದೆ. ಕ್ರೀಡೆಯ ಮೂಲಕ ಸಮಾಜದ ಭಲವರ್ಧನೆಯ ಕೆಲಸವಾಗುತ್ತಿದೆ ಎಂದು ಹೇಳಿದರು.
ಮುಂದುವರೆದು ಛತ್ರಪತಿ ಶಿವಾಜಿ ಮಹಾರಾಜರು ಆರಂಭದಲ್ಲಿ ಕ್ರೀಡೆಯ ಮೂಲಕ ಯುವ ಜನತೆಯನ್ನು ಸಂಘಟಿಸಿ ಬಳಿಕ ಮೊಘಲರ ವಿರುದ್ಧ ಹೋರಾಟಕ್ಕಾಗಿ ಬಲಿಷ್ಠ ಸೈನ್ಯವನ್ನು ನಿರ್ಮಿಸಿದರು. ಇಂದು ಕೂಡ ಸಮಾಜವನ್ನು ಸಂಘಟಿಸುವ ಮೂಲಕ ರಾಷ್ಟ್ರವನ್ನು ಸದೃಢಗೊಳಿಸುವಲ್ಲಿ ಸಮಾಜದ ಜನತೆ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಮಾಜದ ಹಿರಿಯರು ಹಾಗೂ ದಾನಿಗಳಾದ ಉದ್ಯಮಿ ಉಮೇಶ್ ರಾವ್ ರವರು ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾನಿಧಿಗೆ ಸಹಕರಿಸುವುದಾಗಿ ತಿಳಿಸಿದರು.
ಮುಂಡ್ಕೂರು ರಾಜಶ್ರೀ ಸಮೂಹ ಸಂಸ್ಥೆಯ ಮಾಲಕರಾದ ಜನ್ನೊಜಿ ರಾವ್, ಕೆ. ಕೆ. ಎಮ್. ಪಿ ಬೆಂಗಳೂರು ಇದರ ಉಪಾಧ್ಯಕ್ಷರಾದ ನಾಗೇಶ್ ರಾವ್ ವಂಡ್ಸೆ ಮಾತನಾಡಿ ಕಾರ್ಕಳದ ಸಮಾಜ ಬಂದುಗಳ ಶಿಸ್ತು ಹಾಗೂ ವ್ಯವಸ್ಥೆಗೆ ಮೆಚ್ಚುಗೆ ತಿಳಿಸಿದರು.
ಉದ್ಯಮಿಗಳಾದ ಅರುಣ್ ಕುಮಾರ್ ನಿಟ್ಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಭೋದ ರಾವ್, ಸಿ. ಎ ಹರೀಶ್ ರಾವ್ ಮೋರೆ, ಕಾವೇರಿ ಕನ್ಸ್ಟ್ರಕ್ಷನ್ ಜೋಡುಕಟ್ಟೆ ಇದರ ಮಾಲಕರಾದ ರಮಾನಾಥ್ ರಾವ್ ತಾಮಸ, ಎಸ್ ಸತ್ಯಾರ್ಥಿ ರಾವ್ ವೀಡೆ, ಸಂತೋಷ್ ರಾವ್ ಲಾಡ್, ಸಂತೋಷ್ ರಾವ್ ಕವಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರುತಿ ಶಿಂದೆ ಕಾರ್ಯಕ್ರಮ ನಿರೂಪಿಸಿದರು.
ಫೆ. 2ರಂದು ಬೆಳಿಗ್ಗೆ ಮಹಿಳೆಯರಿಗಾಗಿ ತ್ರೋಬಾಲ್ ಕ್ರೀಡಾಕೂಟವನ್ನು ಮುಂಡ್ಕೂರು ರಾಜಶ್ರೀ ಸಮೂಹ ಸಂಸ್ಥೆಯ ಶ್ರೀಮತಿ ಚಂದ್ರಕಲಾ ಜೆ.ರಾವ್ ಇವರು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಡುವ ಮೂಲಕ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ನಿಟ್ಟೆ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪಲ್ಲವಿ ಕೀರ್ತನ್ ಕುಮಾರ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿಟ್ಟೆ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಶ್ರೀಮತಿ ಡಾ. ಸುಮತಿ ರಾವ್ ಪವಾರ್, ಕಾರ್ಕಳ ಸುಂದರ ಪುರಾಣಿಕ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀಮತಿ ವೇದಾವತಿ ಎನ್., ಕೊಪ್ಪ ಮರಾಠ ಸಮಾಜ ಇದರ ಅಧ್ಯಕ್ಷರಾದ ಶ್ರೀಮತಿ ಸುಶೀಲ ರಾವ್ ಪವಾರ್, ಕಾರ್ಕಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ಶೋಭಾ ವಿಠ್ಠಲ್ಜಿ ರಾವ್ ಜಾಧವ್, ಶ್ರೀಮತಿ ನಾಗವೇಣಿ ರಾವ್ ಸೆಪ್ಟೆಕರ್ ಸಾಣೂರು, ಶ್ರೀಮತಿ ಕುಸುಮ ಸುಧಾಕರ್ ರಾವ್ ಬಹುಮಾನ್ ಕಾರ್ಕಳ, ಶ್ರೀಮತಿ ಜಯಂತಿ ದಿನೇಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ, ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ತಮಾಸ, ಮಿಯಾರು ಗ್ರಾಮ ಪಂಚಾಯತ್ ಶ್ರೀಮತಿ ರಾಜೇಶ್ವರಿ ಪ್ರಕಾಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ ಉಪಸ್ಥಿತರಿದ್ದರು.
ಕುಮಾರಿ ದಿಶಾ ರಾವ್ ವೀಡೆ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶಕುಂತಲಾ ರಾವ್ ಕವಡೆ ಸ್ವಾಗತಿಸಿದರು
ಬಹುಮಾನ ವಿತರಣೆ ಸಮಾರೋಪ ಸಮಾರಂಭವು ಫೆ. 2ರಂದು ಸಾಯಂಕಾಲ 5.00 ಗಂಟೆಗೆ ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜ್ ವೇದಿಕೆಯಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ ದಿ ಗ್ರೇಟ್ ಮರಾಠ ಟೀಂನ ಸ್ಥಾಪಕ ಹಾಗೂ ಕೆ. ಕೆ. ಎಂ. ಪಿ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಕೆ ಬಿ ಕೀರ್ತನ್ ಕುಮಾರ್ ಲಾಡ್ ರವರು ಮಾತನಾಡಿ ಈ ಕ್ರಿಡಾ ಕೂಟದ ಯಶಸ್ಸು ದಿ ಗ್ರೇಟ್ ಮರಾಠ ತಂಡದ ಸದಸ್ಯರಿಗೆ ಹಾಗೂ ಕ್ರೀಡಾಪಟುಗಳಿಗೆ ಮತ್ತು ಸಮಾಜ ಬಂಧುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಬೋಳ ಪ್ರಶಾಂತ್ ಕಾಮತ್ ರವರು ಮಾತನಾಡಿ ನಾವು ಎಂದಿಗೂ ಮರಾಠರ ಯಾವುದೇ ಕಾರ್ಯಕ್ರಮವಿದ್ದರೂ ಸಹಕಾರ ಮಾಡುವುದಾಗಿ ತಿಳಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಕಳ ವಕೀಲರಾದ ಸದಾನಂದ ಸಾಲಿಯಾನ್ ಮಾತನಾಡಿ ಕಾರ್ಕಳದ ಮರಾಠರು ಕಾರ್ಕಳಕ್ಕೆ ಮಾದರಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೆ.ಕೆ. ಎಂ.ಪಿ ಉಡುಪಿ ಜಿಲ್ಲೆ ಅಧ್ಯಕ್ಷ ಪ್ರಕಾಶ್ ರಾವ್ ಕವಡೆ ಚಿರಾಗ್ ರಾವ್ ಹೋಟೆಲ್ ಚಿರಾಗ್ ಬಜಗೋಳಿ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಾಹಕಾರ ಸಂಘ ಕಾರ್ಕಳ ಅಧ್ಯಕ್ಷರಾದ ಸಂತೋಷ್ ರಾವ್, ಸಂತೋಷ್ ಲಾಡ್ ಕಾರ್ಕಳ, ಸತ್ಯಾರ್ಥಿ ರಾವ್ ವಿಡೆ, ರಮನಾಥ ರಾವ್, ತಮಾಸ ರಾಜಾರಾಮ ರಾವ್ ಉಪಸ್ಥಿತರಿದ್ದರು.
ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಮಲ್ನಾಡ್ ವಾರಿಯರ್ಸ್ ಕೊಪ್ಪ ಪ್ರಥಮ ಪ್ರಶಸ್ತಿ, ಆರ್ಯನ್ಸ್ ಲೆಜೆಂಡ್ಸ್ ಮಂಗಳೂರು ದ್ವಿತೀಯ ಪ್ರಶಸ್ತಿ, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಮರಾಠ ಯುವನ್ಸ್ ಬೆಳ್ತಂಗಡಿ ಪ್ರಥಮ ಪ್ರಶಸ್ತಿ, ಛತ್ರಪತಿ ಪಡಿಲ್ ದ್ವಿತೀಯ ಪ್ರಶಸ್ತಿ, ಮಹಿಳಾ ಕ್ರಿಕೆಟ್‌ನಲ್ಲಿ ವೀರ್ ಶಿವಾಜಿ ಆದೂರು ಪ್ರಥಮ ಪ್ರಶಸ್ತಿ, ದಿ ಗ್ರೇಟ್ ಮರಾಠ ಕಾರ್ಕಳ ದ್ವಿತೀಯ ಪ್ರಶಸ್ತಿ, ೧೫ ವರ್ಷದ ಒಳಗಿನ ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ ದಿ ಗ್ರೇಟ್ ಮರಾಠ ಕಾರ್ಕಳ ಪ್ರಥಮ ಪ್ರಶಸ್ತಿ, ಕೆ. ಎಂ. ಎಸ್ ಕಾರ್ಕಳ ದ್ವಿತೀಯ ಪ್ರಶಸ್ತಿಯನ್ನು ಪಡೆದರು. ವಿಜೇತರು ಪ್ರಶಸ್ತಿ ಟ್ರೊಫಿ ಹಾಗೂ ನಗದು ಬಹುಮಾನವನ್ನು ಪಡೆದಿರುತ್ತಾರೆ. ಬಹುಮಾನ ವಿತರಣಾ ಕಾರ್ಯಕ್ರಮ ನಿರೂಪಣೆಯನ್ನು ಸಂತೋಷ್ ರಾವ್ ಕವಡೆ ನಿರ್ವಹಿಸಿದರು.