ಸಮಾಜದ ಜನರ ಸಹಕಾರಕ್ಕಾಗಿ ಆರಂಭಗೊಂಡ ಕುಂಭ ಶ್ರೀ ವಿವಿಧೋದ್ದೇಶ ಸಹಕಾರ ಸಂಘವು ಯಶಸ್ಸಿನ ಉತ್ತುಂಗಕ್ಕೆ ಏರ ಬಲ್ಲದು ಎಂದು ಶ್ರೀ ಧಾಮ ಮಾಣಿಲದ ಮೋಹನ ದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡಿದ್ದಾರೆ.
ಕಾರ್ಕಳದಲ್ಲಿ ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಚೇರಿಯನ್ನು ಉದ್ಘಾಟನೆಗೈದರು.
ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ಭಾಗವಹಿಸಿ ಸಹಕಾರಿ ಚಳುವಳಿಗೆ ಶತಮಾನದ ಇತಿಹಾಸವಿದೆ. ಜಿಲ್ಲೆಯಲ್ಲಿ ಆರ್ಥಿಕ ಕ್ಷೇತ್ರದ ಬಲ ವರ್ಧನೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ತರವಾದುದು ಎಂದು ಹೇಳಿದರು.
ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರನಾರಾಯಣ ಭಟ್‌ರವರು ಭದ್ರತಾ ಕೊಠಡಿ ಉದ್ಘಾಟನೆಗೈದು ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸರಕಾರಿ ಯೂನಿಯನ್‌ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ವ್ಯವಹಾರ ವೃದ್ದಿ ಮಾಡಲು ಹಲವಾರು ಕ್ಷೇತ್ರಗಳಲ್ಲಿ ಗಮನ ಹರಿಸುವ ಕಾರ್ಯ ವಿವಿಧೋದ್ದೇಶ ಸಹಕಾರ ಸಂಘಗಳಿಗೆ ನೀಡಿರುವುದು ಅಭಿವೃದ್ದಿಯ ವಿಚಾರದಲ್ಲಿ ಮಹತ್ತರವಾದ ಕಾರ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣ ಮೂಲ್ಯ ವಹಿಸಿದ್ದರು. ಸಂಘದ ಅಭಿವೃದಿ ಹಾಗೂ ವ್ಯವಹಾರದ ವಿಚಾರದಲ್ಲಿ ಜನರಿಗೆ ಸೇವೆ ನೀಡುವ ಮೂಲಕ ಈ ಸಹಕಾರಿ ಸಂಘವು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕುಂಭ ಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್ ಬೇಳಂಜೆ, ಬೆಳ್ಮಣ್ ಕುಂಭ ನಿಧಿ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ರಾವ್, ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೃದಯ ಕುಲಾಲ್, ಕುಂಭ ಶ್ರೀ ಸಹಕಾರ ಸಂಘದ ನಿರ್ದೇಶಕರಾದ ಉಪಾಧ್ಯಕ್ಷ ದಯಾನಂದ ಕುಲಾಲ್ ಹಿರ್ಗಾನ, ಭೋಜ ಕುಲಾಲ್ ಬೇಳಂಜೆ, ಚಂದ್ರ ಕುಲಾಲ್ ಹೆಬ್ರಿ, ದಿವಾಕರ ಎಂ. ಬಂಗೇರ ಅತ್ತೂರು, ಉದಯ ಕುಲಾಲ್ ಹೆರ್ಮುಂಡೆ, ಸುರೇಂದ್ರ ಕುಲಾಲ್ ವರಂಗ, ಪ್ರಭಾಕರ ಇನ್ನಾ, ಹರೀಶ್ಚಂದ್ರ ಕುಲಾಲ್ ಹಿರ್ಗಾನ, ರೇವತಿ ಮೂಲ್ಯ ಇರ್ವತ್ತೂರು, ಜ್ಯೋತಿ ಕುಲಾಲ್ ನಿಟ್ಟೆ ಉಪಸ್ಥಿತರಿದ್ದರು.
ಹೃದಯ ಕುಲಾಲ್ ಸ್ವಾಗತಿಸಿದರು. ಸನ್ನಿಧಿ ಪ್ರಾರ್ಥನೆಗೈದರು, ಪ್ರಭಾಕರ ಇನ್ನಾ ಪ್ರಸ್ಥವನೆಗೈದರು. ಮಂಜುನಾಥ ಹಿಲಿಯಾನ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಬಂಗೇರ ಧನ್ಯವಾದ ಸಲ್ಲಿಸಿದರು.