ಹೆಬ್ರಿ : ಮಾಹೆ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಪುರದ ಪುಷ್ಪರಾಜ್ ಎಂ ನಾಯಕ್ ಉದ್ಯಮಶೀಲತಾ ಉದ್ದೇಶವನ್ನು ನಿರ್ಮಿಸುವಲ್ಲಿ ಉದ್ಯಮಶೀಲತೆಯ ಶಿಕ್ಷಣದ ಶೀರ್ಷಿಕೆಯ ಅನುಭವದ ಕಲಿಕೆ ಮತ್ತು ಸಾಂಪ್ರದಾಯಿಕ ಕಲಿಕೆಯ ಕುರಿತು ಪಿಎಚ್‌ಡಿ ಪದವಿಯನ್ನು ಪಡೆದಿದ್ದು ಫೆಬ್ರವರಿ 11 ರಂದು ಮಣಿಪಾಲ ಮಾಹೆಯಲ್ಲಿ ಪಿಎಚ್‌ಡಿ ಪದವಿ ಪ್ರಧಾನ ನಡೆಯಲಿದೆ.

ಮಾಹೆ ಮಣಿಪಾಲದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಹರೀಶ್ ಜಿ ಜೋಶಿ ಅವರ ಮಾರ್ಗದರ್ಶನದಲ್ಲಿ ಪುಪ್ಪರಾಜ್ ಎಂ. ನಾಯಕ್ ಪಿಎಚ್‌ಡಿ ಅಧ್ಯಯನ ಮಾಡಿದ್ದಾರೆ.


ಪುಪ್ಪರಾಜ್ ಎಂ.ನಾಯಕ್ ಹೆಬ್ರಿ ತಾಲ್ಲೂಕಿನ ಶಿವಪುರ ಮುರ್ಸಾಲು ಮೋಹನದಾಸ ನಾಯಕ್ ಮತ್ತು ಶಕುಂತಳಾ ನಾಯಕ್ ದಂಪತಿಯ ಸುಪುತ್ರ.