ಟೀಚರ್ಸ್ ಕೋ ಆಪರೇಟಿವ್ ಬ್ಯಾ೦ಕಿನ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಪ್ರೌಢ ಶಾಲಾ ಹಾಗೂ ಪದವಿ ಪೂರ್ವ ವಿದ್ಯಾಲಯಗಳ ವಿಭಾಗ, ಕಾಲೇಜು ವಿಭಾಗ, ವೃತ್ತಿಪರ ಹಾಗೂ ತಾಂತ್ರಿಕ ವಿದ್ಯಾ ಸಂಸ್ಥೆಗಳ ವಿಭಾಗ ಹಾಗೂ ಠೇವಣಾತಿ ಸದಸ್ಯ ವಿಭಾಗದ ಸ್ಥಾನಕ್ಕೆ ಚುನಾವಣೆಯು ಫೆ. 02ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕ ಸದಸ್ಯರಿಗೆ-ಕೆನರಾ ಪ್ರೌಢ ಶಾಲೆ, ಕೊಡಿಯಾಲ್‌ಬೈಲ್, ಮಂಗಳೂರು ಇಲ್ಲಿ ಹಾಗೂ ಉಳಿದ ಜಿಲ್ಲೆಯ ಶಿಕ್ಷಕ ಸದಸ್ಯರಿಗೆ-ಎಂ.ಜಿ.ಎಂ. ಕಾಲೇಜು, ಕುಂಜಿಬೆಟ್ಟು, ಉಡುಪಿ ಇಲ್ಲಿ ನಡೆಯಿತು.
ಆಡಳಿತ ಮಂಡಳಿಯ 19 ಸದಸ್ಯರ ಸ್ಥಾನಗಳ ಪೈಕಿ ಪ್ರೌಢ ಶಾಲಾ ಹಾಗೂ ಪದವಿ ಪೂರ್ವ ವಿದ್ಯಾಲಯಗಳ ವಿಭಾಗದಿಂದ ಧರಣೇಂದ್ರ ಕೆ., ರಾಜೀವ ಶೆಟ್ಟಿ, ಮನೋಹರ, ಇದೇ ಕ್ಷೇತ್ರದ ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಕಸ್ತೂರಿ ಹೆಚ್. ಆರ್, ಕಾಲೇಜು ವಿಭಾಗದಿಂದ ವಿದ್ಯಾಧರ ಹೆಗ್ಡೆ ಎಸ್., ಶೇಷಪ್ಪ ಕೆ. ಹಾಗೂ ಇದೇ ಕ್ಷೇತ್ರದ ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ರಾಜೇಂದ್ರ ಕೆ., ವೃತ್ತಿಪರ ಹಾಗೂ ತಾಂತ್ರಿಕ ವಿದ್ಯಾಸಂಸ್ಥೆಗಳ ವಿಭಾಗದಿಂದ ಅವಿನ್ ಬಿ.ಆರ್. ಆಳ್ವ ಹಾಗೂ ಕುಮಾರ್ ನಾಯ್ಕ್ ಎ.ಎಸ್. ಮತ್ತು ಠೇವಣಾತಿ ಸದಸ್ಯ ವಿಭಾಗದಿಂದ ನಿತ್ಯಾನಂದ ಶೆಟ್ಟಿ ರವರು ಆಯ್ಕೆಗೊಂಡಿರುತ್ತಾರೆ.
ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಸಾಮಾನ್ಯ ವಿಭಾಗದಿಂದ ಮಂಜುನಾಥ ಸೀತಾರಾಮ ಹೆಗಡೆ, ಕಿಶನ್‌ರಾಜ್ ಶೆಟ್ಟಿ, ಗಣೇಶ್ ಕುಮಾರ್ ಶೆಟ್ಟಿ ಎಂ., ದಿನಕರ ಶೆಟ್ಟಿ ಕೆ., ಸಂತೋಷ್ ಕುಮಾರ್ ಶೆಟ್ಟಿ, ಇದೇ ಕ್ಷೇತ್ರದ ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ಆನಂದ ಪೂಜಾರಿ, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ನಾಗರತ್ನ ಎಸ್., ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಚಂದ್ರಪ್ಪ ಎಂ. ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮಂಜ ನಾಯ್ಕ ಬಿ.ಈ. ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂಬುದಾಗಿ ಬ್ಯಾಂಕು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.
ಬ್ಯಾಂಕಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗಾಗಿ ಫೆ.12ರಂದು ನಡೆದ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾದ ರಮೇಶ್ ಹೆಚ್.ಎನ್., ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ರವರು ನಡೆಸಿಕೊಟ್ಟರು. ಟೀಚರ್‍ಸ್ ಕೋ-ಆಪರೇಟಿವ್ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ದಿನಕರ ಶೆಟ್ಟಿ ಕೆ. ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಎಸ್. ಇವರು ಆಯ್ಕೆಯಾಗಿರುತ್ತಾರೆ.