ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಇದರ ನಿರ್ದೇಶಕರಾಗಿ ಅನಿಲ್ ಎಸ್ ಪೂಜಾರಿ ಮಾಳ ಆಯ್ಕೆ ಆಗಿದ್ದಾರೆ.
ಎರಡನೇ ಬಾರಿಗೆ ನಿರ್ದೇಶಕರಾಗುವ ಅವಕಾಶ ಇವರಿಗೆ ಒದಗಿ ಬಂದಿದೆ.
ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ತನ್ನ ಅಧ್ಯಕ್ಷ ಅವಧಿಯಲ್ಲಿ ಈ ಸಹಕಾರಿ ಸಂಘವನ್ನು ಯಶಸ್ಸಿನತ್ತ ಕೊಂಡೊ
ಯ್ಯಲು ಶ್ರಮಿಸಿದ್ದಾರೆ.ಇವರು ಕಳೆದ 20 ವರ್ಷಗಳಿಂದ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಾಳ ಗ್ರಾಮ ಪಂಚಾಯತ್ ನಲ್ಲಿ 3 ಬಾರಿ ಸದಸ್ಯರಾಗಿ,ಉಪಾಧ್ಯಕ್ಷರಾಗಿ, ಕೆ ಡಿ ಪಿ ಸದಸ್ಯರಾಗಿ 2 ಬಾರಿ ಸೇವೆ ಸಲ್ಲಿಸಿದ್ದಾರೆ.
ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಬಜಗೋಳಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಕಳ ತೋಟಗಾರಿಕ ರೈತ ಉತ್ಪಾದಕರ ಕಂಪನಿ ನಿರ್ದೇಶಕರಾಗಿ, ಮಹಾ ಗಣಪತಿ ಸೇವಾ ಮತ್ತು ಅಭಿವೃದ್ಧಿ ಸಮಿತಿಯ ಕೋಶಾ ಧಿಕಾರಿಯಾಗಿ, ಪ್ರಸ್ತುತ ಬ್ಲಾಕ್ ಕಾಂಗ್ರೇಸ್ ಕಾರ್ಕಳ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
next post