ಬೈಲೂರು: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರೆ ನಾಟ್ಲಾ ನಿವಾಸಿ ಸುಂದರಿ ಪೂಜಾರಿ ನಿನ್ನೆಯಿಂದ (ಫೆಬ್ರವರಿ 10) ಕಾಣೆಯಾಗಿದ್ದಾರೆ.
ನಿನ್ನೆ ಬೆಳಿಗ್ಗೆ 10.30 ಸುಮಾರಿಗೆ ಮನೆ ಬಿಟ್ಟು ಹೊರಗೆ ಹೋದವರು ಮನೆಗೆ ಹಿಂತಿರುಗಿ ಬಂದಿರುವುದಿಲ್ಲ. ಮನೆಯವರು ನಿನ್ನೆಯಿಂದ ಹುಡುಕಾಟದಲ್ಲಿದ್ದು ಈ ಸಮಯದವರೆಗೆ (ಬೆಳಿಗ್ಗೆ ಗಂಟೆ 9) ಸಿಕ್ಕಿರುವುದಿಲ್ಲ. ಈಗಾಗಲೇ ಸಂಬಂಧಿಕರ ಮನೆ ಹಾಗೂ ಮನೆಯ ಸುತ್ತಮುತ್ತಲಿನ ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ. ಇಂದು ಬೆಳಿಗ್ಗೆ . (ಫೆಬ್ರವರಿ 11)ಸುಮಾರು 5 ಗಂಟೆಗೆ ಜಾರ್ಕಳದಲ್ಲಿ ಕಾರ್ಕಳದ ಕಡೆಗೆ ಮಹಿಳೆಯರು ನಡೆದುಕೊಂಡು ಹೋಗುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ ಆದರೆ ಯಾರೆಂಬುದು ಪತ್ತೆ ಆಗಿಲ್ಲ. ಈ ಪ್ರದೇಶದಲ್ಲಿದ್ದ ಕೆಲವೊಂದು ಸಿಸಿ ಟಿವಿಯನ್ನು ಪರಿಶೀಲಿಸುತ್ತಿದ್ದಾರೆ.
ಈ ಫೋಟೋದಲ್ಲಿರುವ ಮಹಿಳೆಯನ್ನು ಯಾರಾದರೂ ಕಂಡಲ್ಲಿ ಈ ಕೆಳಗಿನ ಮೊಬೈಲಿಗೆ (ಸುಕೇಶ್ ಪೂಜಾರಿ +916362144907 ) ಕರೆ ಮಾಡಿ ಸೂಚಿಸುವಂತೆ ಮನೆಯವರು ವಿನಂತಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ಇನ್ನಷ್ಟೇ ದಾಖಲಾಗಬೇಕಾಗಿದೆ
previous post