ಬೈಲೂರು: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರೆ ನಾಟ್ಲಾ ನಿವಾಸಿ ಸುಂದರಿ ಪೂಜಾರಿ (85ವ,)ನಿನ್ನೆಯಿಂದ (ಫೆ. 10) ಕಾಣೆಯಾಗಿದ್ದವರು ಇಂದು (ಫೆ.11) ಮೃತವಾಗಿ ಪತ್ತೆಯಾಗಿದ್ದಾರೆ.
ನಿನ್ನೆ ಬೆಳಿಗ್ಗೆ (ಫೆ. 10) 10.30 ಗಂಟೆಗೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಮನೆಗೆ ಹಿಂತಿರುಗಿ ಬಂದಿರುವುದಿಲ್ಲ. ಈ ಬಗ್ಗೆ ಮನೆಯವರು ಹಾಗೂ ಸ್ಥಳೀಯರು ಬೈಲೂರು ಹಾಗೂ ಮನೆಯ ಪರಿಸರದಲ್ಲಿ ನಿನ್ನೆಯಿಂದ ಹುಡುಕಾಟದಲ್ಲಿದ್ದು ಇಂದು 11 ಗಂಟೆ ಸುಮಾರಿಗೆ ಡ್ರೋನ್ ಮೂಲಕ ಕಾರ್ಯಾಚರಣೆ ಮಾಡಿದಾಗ ಮನೆಯಿಂದ ಎರಡು ಕಿಲೋಮೀಟರ್ ಅಂತರದ ಗದ್ದೆಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ನಿನ್ನೆ ಮನೆಯಿಂದ ಹೊರಗೆ ಹೋದವರು ಹಿಂತಿರುಗಿ ಮನೆಗೆ ಬರುವಾಗ ದಾರಿ ತಪ್ಪಿ ಹೋಗಿರಬಹುದು ಹಾಗೂ ತಲೆ ತಿರುಗಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಲಾಗಿದೆ.
ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ಇನ್ನಷ್ಟೇ ದಾಖಲಾಗಬೇಕಾಗಿದೆ
previous post
next post