ಕುಂಭ ನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ ಬೆಳ್ಮಣ್ ಇದರ 30ನೇ ಸ್ವ ಸಹಾಯ ಗುಂಪು *”ಶ್ರೀ ಮಂಜುನಾಥೇಶ್ವರ ಸ್ವ ಸಹಾಯ ಸಂಘ ಉದ್ಘಾಟನೆ”**
**ಇನ್ನಾ ಗ್ರಾಮದ ಕೋಡಿ ಗಜೇಂದ್ರ ಮೂಲ್ಯಇವರ ಮನೆಯಲ್ಲಿ ಬೆಳ್ಳಣ್ ಕುಂಭ ನಿಧಿ ‘ ಉದ್ಘಾಟನೆಯನ್ನು
ಸೊಸೈಟಿ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ ಅವರು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು ಸೊಸೈಟಿಯು ಗ್ರಾಹಕರ ಸಹಕಾರದಿಂದ ಮೂರು ತಿಂಗಳಲ್ಲಿ 1 ಕೋಟಿ ರೂಪಾಯಿ ಹೆಚ್ಚಿನ ಆರ್ಥಿಕ ವಹಿವಾಟು ಸಾಧನೆ ಮಾಡಲು ಸಾಧ್ಯವಾಯಿತು ,” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಸೊಸೈಟಿಯ ಸದಸ್ಯರಿಗೆ ವಿವಿಧ ಉಪಯುಕ್ತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಗಟ್ಟಿಯಾಗಿಸಲು ನೆರವಾಗುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಜಗನ್ನಾಥ್ ಮೂಲ್ಯ, ನಿರ್ದೇಶಕಿ ಶ್ರೀಮತಿ ಪ್ರತಿಮಾ ಶ್ರೀಧರ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬ್ರಿಜೇಶ್ ಕುಲಾಲ್ ಸ್ವಾಗತಿಸಿ ಸೊಸೈಟಿಯ ಮಾಹಿತಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

