ಬೈಲೂರುನಲ್ಲಿ ವಲಯ ಕಾಂಗ್ರೆಸ್ ಕಛೇರಿಯನ್ನು ಆರಂಭ ಮಾಡಲಾಯಿತು.
ಕಾಂಗ್ರೇಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿಯವರು ಕಚೇರಿಯನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ರಾಜ್ಯದ ಜನರಿಗೆ ಅಪಾರ ಯೋಜನೆಗಳನ್ನು ನೀಡುವ ಮೂಲಕ ಕಾಂಗ್ರೇಸ್ ಪಕ್ಷ ಮನೆ ಮಾತಾಗಿದ್ದು, ಕಾರ್ಕಳದಲ್ಲಿ ಕೂಡ ಸಂಘಟಿತರಾಗುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ಹಿರ್ಗಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಬ್ಲಾಕ್ ಕಾಂಗ್ರೇಸ್ ಅಧ್ಯಕರಾದ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಮಾಜಿ ತಾಪಂ ಅಧ್ಯಕ್ಷ ಕರುಣಾಕರ ಹೆಗ್ಡೆ, ಭೋಜ ಶೆಟ್ಟಿ ಯರ್ಲಪಾಡಿ, ಸದಸ್ಯರು ಯಶೋದಾ, ಬೈಲೂರು ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷ ಉದಯ ಶೆಟ್ಟಿ, ಸಚಿನ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸಂದೀಪ್ ಶೆಟ್ಟಿ ಅಜೆಕಾರ್, ರಮೇಶ್ ಶೆಟ್ಟಿ ರೆಂಜಾಳ, ಸೂರಜ್ ಶೆಟ್ಟಿ ನಕ್ರೆ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ , ಮಲ್ಲಿಕ್ ನಗರ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ರೀನಾ ಮತ್ತಿತರರು ಉಪಸ್ಥಿತರಿದ್ದರು.
next post