ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಚಿಕ್ಕಲ್‌ಬೆಟ್ಟು ಹಿರ್ಗಾನ ಇಲ್ಲಿ ವಾರ್ಷಿಕ ಗೌಣೋತ್ಸವವು ಫೆ. 12ರಿಂದ 16ರವರೆಗೆ ವೇದಮೂರ್ತಿ ಜಾರ್ಕಳ ಪ್ರಸಾದ ತಂತ್ರಿ ಮತ್ತು ಆರ್ಚಕರಾದ ಗಣೇಶ್ ಭಟ್ ರವರ ನೇತೃತ್ವದಲ್ಲಿ ಜರಗಲಿದೆ.
ಫೆ. 14ನೇ ಶುಕ್ರವಾರದಂದು ಬೆಳಿಗ್ಗೆ ಶ್ರೀ ದೇವರಿಗೆ ಪಂಚಗವ್ಯ, ಪುಣ್ಯಾಹ, ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಸವಾರಿ ಬಲಿ ಮತ್ತು ಶ್ರೀ ಭೂತ ಬಲಿ, ಕವಾಟ ಪೂರಣ, ಸಾರ್ವತ್ರಿಕರಿಂದ ವಂದನಾರ್ಪಣೆ ನಡೆಯಲಿದೆ.
ಫೆ.15ನೇ ಶನಿವಾರದಂದು ಬೆಳಿಗ್ಗೆ ಉದಯ ಕಾಲದಲ್ಲಿ ಕವಾಟೋದ್ಘಾಟನೆ, ದೇವರಿಗೆ ದಶವಿಧಿ ಸ್ನಾನ, ಪಂಚಾಮೃತ ಪುರಸ್ಸರ ಕಲಶಾಭಿಷೇಕ, ಮಂಗಳಾರತಿ, ಅಷ್ಟವಾದನ ಸೇವೆ, ಪರಿವಾರ ಪೂಜೆ, ತುಲಭಾರಾಧಿ ಹರಕೆ ಸೇವೆ, ಶ್ರೀ ಮಹಾಗಣಪತಿ ದೇವರಿಗೆ 108 ತೆಂಗಿನ ಕ್ಯಾ ಗಣಯಾಗ, ಅಪ್ಪದ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 5.00ಕ್ಕೆ ಶ್ರೀ ಕೊಡಮಣಿತ್ತಾಯ ಸ್ಥಾನದಿಂದ ಭಂಡಾರ ಇಳಿದು, ಗಂಟೆ 7.00ಕ್ಕೆ ಶ್ರೀ ದೇವರಿಗೆ ಪ್ರಸನ್ನಪೂಜೆ, ರಾತ್ರಿ 9.00ಕ್ಕೆ ರಾಜಂದೈವ, ಕೊಡಮಣಿತ್ತಾಯ, ಕುಕ್ಕಿನಂತಾಯ, ರಕೇಶ್ವರಿ, ಬೈದರ್ಕಳ ನೇಮೋತ್ಸವ, ರಾತ್ರಿ ಗಂಟೆ 3.00ರಿಂದ ಬಲಿ, ಓಕುಳಿ, ಅವಭೃತ ಸ್ನಾನ, ಧ್ವಜಾವರೋಹಣ, ಭಜನೆ ಪ್ರಾರಂಭ, ಮಹಾಮಂಗಳಾರತಿ ನಡೆಯಲಿದೆ.
ಫೆ. 16ನೇ ಆದಿತ್ಯವಾರದಂದು ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ. 17ನೇ ಸೋಮವಾರದಿಂದ 23ನೇ ಆದಿತ್ಯವಾರದವರೆಗೆ ರಾತ್ರಿ ಭಜನೆ, ಪೂಜೆ, ಫೆ.24ನೇ ಸೋಮವಾರ ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಭಜನಾ ಮಂಗಲೋತ್ಸವ, ಮಾರಿ, ಗೋಂದೂಳು ವಗೈರೆ ಕಾರ್ಯಕ್ರಮ ಜರಗಲಿದೆ. ತುಲಾಭಾರ ಸೇವೆಯು ಜಾತ್ರೆಯ ಎಲ್ಲಾ ದಿನಗಳಲ್ಲಿ ಜರಗಲಿದೆ.