ಹೆಬ್ರಿ ತಾಲೂಕು ಶಿವಪುರ ಗ್ರಾಮದ ಹರೀಶ (35) ರವರು ದಿನಾಂಕ 14/02/2025 ರಂದು ಬೆಳಗ್ಗೆ ಕೆಲಸಕ್ಕೆ ಎಂದು ಮನೆಯಲ್ಲಿ ತನ್ನ ಹೆಂಡತಿ ಸುಮಾವತಿ ರವರಿಗೆ ಹೇಳಿ ಹೋಗಿದ್ದು ವಾಪಾಸು ಬಂದಿರುವುದಿಲ್ಲ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2025 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಇನ್ನೊಂದು ಪ್ರಕರಣದಲ್ಲಿ ಶಾರದ (70),ಕಾರ್ಕಳ ಇವರ ಕಿರಿಯ ಮಗ ರವಿ (38) ಇವರು ಮಲ್ಪೆ ತೊಟ್ಟಂನ ಶ್ರೀನಿಧಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08/02/2025 ರಂದು 07:00 ಗಂಟೆಗೆ ಹೊಟೆಲ್ ನಿಂದ ಕಾರ್ಕಳ ತಾಲೂಕಿನ ಅಜೆಕಾರಿನ ಕೈಕಂಬದಲ್ಲಿನ ತನ್ನ ವಾಸ್ಯವ್ಯದ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು ಹೋಗದೇ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2025 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
previous post