ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪ್ರಭಾಕರ್ ಬಂಗೇರರನ್ನು ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್‌ರವರು ಪ್ರಭಾಕರ್ ಬಂಗೇರ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಿವಪ್ರಸಾದ್ ರಾವ್, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಪ್ರಧಾನ ಅರ್ಚಕರಾದ ಹರಿಕೃಷ್ಣ ಭಟ್, ರಮೇಶ್ ಬಿ ಪೆರ್ವಾಜೆ, ಶ್ರೀಮತಿ ಅರುಂಧತಿ ಬಿ ಆಚಾರ್, ಶ್ರೀಮತಿ ಶ್ಯಾಮಲಾ ಶೆಟ್ಟಿ, ಸುಕೇಶ್ ಸುವರ್ಣ, ನಿತ್ಯಾನಂದ ಕೆ, ರಾಜೇಶ್ ಕಲ್ಲೋಟ್ಟೆ, ಸುನಿಲ್ ಕುಮಾರ್ ಪೋಲ್ಲರ್ ಉಪಸ್ಥಿತರಿದ್ದರು.