ಸದ್ರಿ ಸಂಸ್ಥೆಯು ಗೇರು ಬೀಜ ತಿರುಳು ತಯಾರಿಸಿ ಮಾರಾಟ ಮಾಡುವ ಘಟಕವಾಗಿದ್ದು ಸದ್ರಿ ಸಂಸ್ಥೆಗೆ ರಾಜಸ್ಥಾನ ಮೂಲದ ಮನ್ನತ್ ಓವರ್ ಸೀಸ್ ಕಂಪೆನಿ ಹೆಸರಿನಲ್ಲಿರವಿ ಲಾಲ್ವಾನಿ ಗೋಪಾಲ ಲಾಲ್ವಾನಿ ಮೋಹನ್ ಕನ್ನಯ್ಯ ಲಾಲ್ವಾನಿ ಇವರೆಲ್ಲರೂ ಸದ್ರಿ ಸಂಸ್ಥೆ ಗೆ ಲಕ್ಷಾಂತರ ರೂ ವಂಚನೆ ಮಾಡಿದ್ದು ಇವರೆಲ್ಲರೂ ರಾಜಸ್ಥಾನದವರಾಗಿರುತ್ತಾರೆ
ಇವರು ಎರಡು ಮೂರು ಬಾರಿ ಬೇಟಿ ಮಾಡಿ ಕ್ಯಾಶ್ಯೂ ಕರ್ನಲ್‌ಗಳನ್ನು ತಮಗೆ ಸರಬರಾಜು ಮಾಡಬೇಕಾಗಿ ನ್ಯೂ ರಾ ಮಾನಾಥ್ ಕ್ಯಾಶೂ ಇಂಡಸ್ಟ್ರೀಸ್ ಮುದ್ರಾಡಿ ಮ್ಯಾನೇಜಿಂಗ್ ಪಾರ್ಟನರ್ ಆಗಿದ್ದ ಅನಂತ ಪದ್ಮನಾಭ ಅವರನ್ನು ನಂಬಿಸಿ ವ್ಯವಹಾರ ಮಾಡುತ್ತಿದ್ದು ಮೊದ ಮೊದಲು ಗೇರು ಬೀಜ ಕರ್ನಲ್ ತೆಗೆದು ಕೊಂಡಿರುವುದಕ್ಕೆ ಹಣ ಪಾವತಿ ಮಾಡುತ್ತಿದ್ದು
ದಿನಾಂಕ 12/05/2023 ರಂದು ವಿವಿದ ಗ್ರೇಡ್‌ನ 5,82,540-00 ಮೌಲ್ಯದ ಗೇರು ಬೀಜ ತಿರುಳನ್ನು ಅವರ ಬೇಡಿಕೆ ಮೇರೆಗೆ ಜಿ,ಎಸ್,ಟಿ ಬಿಲ್ ಮುಖಾಂತರ ಸರಬರಾಜು ಮಾಡಿದ್ದರು ಆಪಾದಿತರು ಹಣವನ್ನು ನೀಡದೆ ಮೊಬೈಲ್ ಸ್ಚಿಚ್ ಆಪ್ ಮಾಡಿಕೊಂಡಿದ್ದಾರೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.