ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಸಂಘದ ಹದಿನೇಳನೇ ವರ್ಷದ ವಾರ್ಷಿಕೋತ್ಸವವು ದೊಂಡೇರಂಗಡಿಯಲ್ಲಿ ನಡೆಯಿತು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಯಮಿ ಮುಂಡಾರು ಪ್ರಸನ್ನ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಸುಕೇಶ್ ಹೆಗ್ಡೆ, ಸತೀಶ್ ಶೆಟ್ಟಿ, ರಘುನಾಥ ನಾಯಕ್, ದೀಕ್ಷಿತ್ ಶೆಟ್ಟಿ, ಸುರೇಶ ಮರಕಲ, ಮಂಜುನಾಥ ಕುಲಾಲ್, ರಾಮಕೃಷ್ಣ ನಾಯಕ್, ಶಾಂತಿ ಪ್ರಭು, ಸಂಘದ ಗೌರವ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಯಕ್ಷಶಿಕ್ಷಣದ ಶಿಕ್ಷಾರ್ಥಿಗಳಿಂದ ಶ್ರೀ ರಾಮದರ್ಶನ ಎನ್ನುವ ಪೌರಾಣಿಕ ಪ್ರಸಂಗವು ಪ್ರದರ್ಶನಗೊಂಡಿತು.
ಸಂಘದ ಅಧ್ಯಕ್ಷ ಹರೀಶ್ ದುಗ್ಗನ್ ಬೆಟ್ಟು ಸ್ವಾಗತಿಸಿದರು. ಕುಕ್ಕುಜೆ ವಿನಯ ಆರ್ ಭಟ್ ನಿರೂಪಿಸಿ, ವಂದಿಸಿದರು.
ಬಳಿಕ ಸಂಘದ ಕಲಾವಿದರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗವು ಪ್ರದರ್ಶನಗೊಂಡಿತು.