ಕಾರ್ಕಳ

ಮಾರ್ಚ್ 15ರಂದು 21 ನೇ ವರ್ಷದ ಮಿಯ್ಯಾರು ಲವಕುಶ ಕಂಬಳ- ವಿ. ಸುನಿಲ್ ಕುಮಾರ್

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಕೂಟವು ಮಾ.15ಶನಿವಾರ ಬೆಳಿಗ್ಗೆ 8.00ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಕಂಬಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾಡಿಕೆಯಂತೆ ಪ್ರತಿವರ್ಷ ಜನವರಿ ತಿಂಗಳ ಮೊದಲವಾರದಲ್ಲಿ ನಡೆಯಬೇಕಿದ್ದ ಈ ಕಂಬಳ ಕ್ರೀಡೆ ಮಿಯ್ಯಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂದೂಡಲ್ಪಟ್ಟಿತ್ತು. ಮಾರ್ಚ್ ೧೫ನೇ ತಾರೀಕು ಜಿಲ್ಲೆಯಲ್ಲಿಇತರ ಯಾವುದೇ ಕಂಬಳಕೂಟ ನಡೆಯದೆ ಇರುವುದರಿಂದ ಜಿಲ್ಲಾ ಕಂಬಳ ಸಮಿತಿ ಮತ್ತು ಸ್ಥಳೀಯ ಸಮಿತಿಯ ನಿರ್ಣಯದಂತೆ ಆ ದಿನದಂದೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕಂಬಳಕೂಟವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ. ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್ ಅಡ್ಯಂತಾಯರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ವರ್ಷ ಕೂಡಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು ೨೪ ಗಂಟೆಯೊಳಗೆ ಸ್ಪರ್ಧೆಯನ್ನು ಅಂತಿಮ ಹಂತಕ್ಕೆ ತಲುಪಿಸುವ ಎಲ್ಲಾ ಪ್ರಯತ್ನ ಕಂಬಳ ಸಮಿತಿಯಿಂದ ನಡೆಯುತ್ತಿದೆ. ಉಸ್ತುವಾರಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್, ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯ್ಲಿ, ಡಾ.ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲೆಯ ಶಾಸಕರುಗಳು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಜೊತೆಗೆ ಆನೇಕ ಗಣ್ಯರು ಈ ಜಾನಪದ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.

Related posts

ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಗ್ರಹ ಶನಿಶಾಂತಿ ಸಹಿತ ಶನೈಶ್ಚರ ಪೂಜೆ ಹಾಗೂ ದೀಪೋತ್ಸವ

Madhyama Bimba

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Madhyama Bimba

ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೆ ಜಾಮೀನು ರಹಿತ ಸುಮೊಟೊ ಕೇಸು ದಾಖಲಿಸಿದಿರುವುದನ್ನು ಖಂಡಿಸುತ್ತೇನೆ : ಶ್ರೀಮತಿ ರಮಿತಾ ಕಾರ್ಕಳ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More