ರಾಜ್ಯದಲ್ಲಿ ಬಿಸಿಲಿನ ಶಾಖ ಅಧಿಕವಾಗಿದ್ದು, ಕರಾವಳಿಯ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎರಡು ದಿನ ‘ಬಿಸಿ ಗಾಳಿ’ ಮುನ್ಸೂಚನೆ ನೀಡಿದ್ದು, ಯೆಲ್ಲೊ ಅಲರ್ಟ್ ಘೋಷಿಸಿದೆ.
ನಾಳೆ ಯೆಲ್ಲೋ ಅಲರ್ಟ್
ಫೆ.27 ಮತ್ತು 28ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಾಪಮಾನ 37 ರಿಂದ 38 ಡಿ.ಸೆ.ಗೇರುವ ಸಾಧ್ಯತೆ ಇದ್ದು, ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿದೆ.
ಮುನ್ನೆಚ್ಚರಿಕೆ ಅನುಸರಿಸಿ
* ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೊರಗಡೆ ಹೋಗಬೇಡಿ
* ಸಾಕಷ್ಟು ನೀರು, ಮಜ್ಜಿಗೆ ಕುಡಿಯಿರಿ
•ಸಾಧ್ಯವಾದಷ್ಟು ಹಗುರವಾದ, ಹತ್ತಿ ಉಡುಪುಗಳನ್ನು ಧರಿಸಿ
•ಛತ್ರಿ, ಟೋಪಿ ಅಥವಾ ಬಟ್ಟೆಯಿಂದ ತಲೆಗೆ ರಕ್ಷಣೆ ಪಡೆಯಿರಿ
* ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ಹಿರಿಯರ ಕುರಿತು ಹೆಚ್ಚಿನ ಕಾಳಜಿ ವಹಿಸಿ
ಇದನ್ನು ಮಾಡಲೇಬೇಡಿ
•ನೇರ ಬಿಸಿಲು/ಬಿಸಿಗಾಳಿಗೆ ಒಡ್ಡಿಕೊಳ್ಳಬೇಡಿ
•ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ
•ಕಪ್ಪು/ಗಾಢ ಬಣ್ಣದ ತೆಳುವಾದ ಹಾಗೂ ಸಿಂಥೆಟಿಕ್ ಉಡುಪುಗಳನ್ನು ಧರಿಸಬೇಡಿ
•ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬೇಡಿ
* ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬೇಡಿ, ಬಿಸಿ ಚಹಾ, ಮದ್ಯ ಸೇವಿಸಬೇಡಿ