ಮೂಡುಬಿದಿರೆ

ಪಡ್ಡ್ಯಾರಬೆಟ್ಟದಲ್ಲಿ ನಾಳೆಯಿಂದ ವರ್ಷಾವಧಿ ಜಾತ್ರೆ

ಬೆಳ್ತಂಗಡಿ ತಾಲೂಕಿನ ಪೆರಿಂಜೆಯ ಶ್ರೀಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಮಾ. 14ರಿಂದ ಮಾ.19ರ ವರೆಗೆ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆಯು ಮಾರೂರು ಖಂಡಿಗ ಶ್ರೀ ರಾಮದಾಸ ಆಸ್ರಣ್ಣರ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅನುವಂಶೀಯ ಆಡಳಿತದಾರ ಎ. ಜೀವಂಧರ. ಕುಮಾರ್ ಯಾನೆ ಕಂಚಿ ಪೂವಣಿ ಪಡ್ಡ್ಯೋಡಿಗುತ್ತು ತಿಳಿಸಿದ್ದಾರೆ.


ಮಾ.14ರಂದು ಮೀನ ಸಂಕ್ರಮಣ ದಿನ ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃ ತಾಭಿಷೇಕ, ಅಮ್ಮನವರಿಗೆ ವರಹ ಪೂಜೆ, ರಾತ್ರಿ 9.30ಕ್ಕೆ ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿ ಯುವುದು, ಪಡ್ಡ್ಯಾರಬೆಟ್ಟಕ್ಕೆ ಆಗಮನ, ಧ್ವಜಾರೋಹಣ, ಬಲಿ ನಡೆಯಲಿದೆ.

ಮಾ.15ರಂದು ಭೂತಬಲಿ ಉತ್ಸವ, ಮಾ 16ರಂದು ಅಂಬೋಡಿ, ಬಲಿ, ಉತ್ಸವ, ಹೂವಿನ ಪೂಜೆ, ರಥಾರೋಹಣ, ಮಾ. 17ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ಗಂಟೆ 12ರಿಂದ ರಥದಲ್ಲಿ ಮಹಾ ಪೂಜೆ, ರಥೋತ್ಸವ, ಹೂವಿನ ಪೂಜೆ, ಮಧ್ಯಾಹ್ನ 1.30ರಿಂದ ಸಂಜೆ 7.30ರ ತನಕ ಮಹಾ ಅನ್ನ ಸಂತರ್ಪಣೆ, ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಮಾ.18ರಂದು ಧ್ವಜಾವರೋಹಣ, ಸಂಪ್ರೋಕ್ಷಣೆ, ಪಡ್ಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗುವುದು, ಮಾ.19 ರಂದು ರಾತ್ರಿ 7.30 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ, ರಾತ್ರಿ 8 ರಿಂದ ಗಾನ ಸುರಭಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.

Related posts

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಆಹಾರೋತ್ಸವ 2024

Madhyama Bimba

ಜೆಇಇ ಫಲಿತಾಂಶ: ಆಳ್ವಾಸ್ ಪದವಿಪೂರ್ವ ವಿದ್ಯಾರ್ಥಿಗಳ ಸಾಧನೆ- 63 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

Madhyama Bimba

ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ-ಆಳ್ವಾಸ್ ಶಾಲೆಗೆ 71ಪದಕದೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ- ಮೂರು ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More