ಅತ್ತೂರು ಪದವು ಪುಷ್ಪ ಮೂಲ್ಯ ಎಂಬವರ ಮನೆಗೆ ಕಳ್ಳರು ನುಗ್ಗಿ 10 ಪವನ್ ಚಿನ್ನ ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಇವರ ಮನೆಗೆ ಬೈಕ್ ನಲ್ಲಿ ಗುಜಿರಿ ಖರೀದಿ ಮಾಡಲು ವ್ಯಕ್ತಿಯೋರ್ವ ಬಂದಿದ್ದ.
ಸ್ವಲ್ಪ ಹೊತ್ತಿನಲ್ಲಿ ಮನೆಯಿಂದ ಕಳ್ಳತನ ಆಗಿದೆ. ಸಾಯಂಕಾಲ ಪುಷ್ಪ ಮೂಲ್ಯ ಮನೆಗೆ ಬಂದಾಗ ಮನೆಯ ಬೀಗ ಒಡೆದು ಕಳ್ಳತನ ಆಗಿರುವುದು ತಿಳಿದು ಬಂತು.
ಪೊಲೀಸರು ಈ ಘಟನೆ ಬಗ್ಗೆ ತೀವ್ರ ಶೋಧ ಆರಂಭಿಸಿದ್ದಾರೆ. ಶ್ವಾನ ದಳ ಕೂಡಾ ಸ್ಥಳಕ್ಕೆ ಆಗಮಿಸಿದೆ.
ಬಳೆ 2 ಸರ
ಪಕಳದ ಸರ
ನೆಕ್ಲೆಸ್
ಉಂಗುರ
ಕಿವಿ ಓಲೆ ಜುಮ್ಕಿ
ಮೂಗು ಬೊಟ್ಟು
ಕಾರ್ಕಳದಲ್ಲಿ ಕಳೆದ 3 ವರ್ಷಗಳಿಂದ ನಿರಂತರ ಕಳ್ಳತನ ಆಗುತ್ತಿದೆ. ಕಳ್ಳರು ತಮ್ಮ ಚಾಲಾಕಿ ತನದಿಂದ ಕಳ್ಳತನ ಮಾಡುತ್ತಲೇ ಬಂದಿದ್ದಾರೆ.