ಕಾರ್ಕಳ: ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ಮುಂಬಯಿ ಗೆ ಹೋಗುವ ಬಸ್ ಡಿಕ್ಕಿಯಾದ ಘಟನೆ ಪರ್ಪಲೆ ಕುಂಟಲ್ಪಾಡಿಯಲ್ಲಿ ಶುಕ್ರವಾರ ನಡೆದಿದೆ.
ಕಾರ್ಕಳದಿಂದ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ಹೋಗುವ ಖಾಸಗಿ ಬಸ್, ಎದುರುಗಡೆಯಿಂದ ಬರುತ್ತಿದ್ದ ನಿಶಾಲ್ ಖಾಸಗಿ ಬಸ್‌ನ ಬಲಬದಿಗೆ ಡಿಕ್ಕಿ ಹೊಡಿದಿದೆ . ಇದರ ಪರಿಣಾಮವಾಗಿ ಹಿಂಭಾಗದ ಸೀಟಿನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗಿದೆ.
ಅಪಘಾತದಿಂದಾಗಿ ಖಾಸಗಿ ಬಸ್‌ನ ಹಿಂಭಾಗ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್‌ನಲ್ಲಿ ಕರೆದೊಯ್ಯ ಲಾಯಿತು.
ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ