ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಸಂಸ್ಥೆಯು ಶ್ರೀ ರಾಮ್ ಲೈಫ್ ಇನ್ಸೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ತನ್ನ ಸಾಲಗಾರ ಸದಸ್ಯರಿಗೆ ಸಾಲ ಸಂರಕ್ಷಣೆ ಜೀವ ವಿಮಾ ಪಾಲಿಸಿ ಸೌಲಭ್ಯವನ್ನು ಫೆ.26 ರಂದು ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಅನುಷ್ಠಾನಿಸಿದರು.
ಈ ಸೌಲಭ್ಯವನ್ನು ಸಂಘದ ಸಾಲಗಾರ ಸದಸ್ಯರು ನಿಧನರಾದರೆ ಅವರ ಬಾಕಿ ಇರುವ ಸಾಲವು ವಿಮೆಯ ಮೂಲಕ ಪಾವತಿಯಾಗುವುದಲ್ಲದೇ, ಹೆಚ್ಚುವರಿ ವಿಮಾ ಮೊಬಲಗು ಅವರ ಉತ್ತರಾಧಿಕಾರಿಗಳಿಗೆ ಲಭಿಸುವುದು. ಇದರಿಂದ ಸಾಲಗಾರರ ನಿಧನಾನಂತರ ಅವರ ಕುಟುಂಬಕ್ಕೆ ಸಾಲ ಮರುಪಾವತಿಯ ಹೊರೆಯು ಇರುವುದಿಲ್ಲ. ಈ ಸೌಲಭ್ಯದಡಿ 50 ವಯಸ್ಸಿನವರೆಗಿನ ಸಾಲಗಾರರಿಗೆ ಅವರು ಪಡೆಯುವ ರೂ.14 ಲಕ್ಷದವರೆಗಿನ ಮೊಬಲಗಿನ ಸಾಲಕ್ಕೆ ಈ ಸೌಲಭ್ಯದ ವಿಮಾ ಸಂರಕ್ಷಣೆ ದೊರಕುತ್ತದೆ.
ಶ್ರೀ ರಾಮ್ ಲೈಫ್ ಇನ್ಸೂರೆನ್ಸ್ ಕಂಪೆನಿಯ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಆದೇಶ್ ಅರಮನೆ ತೋಟರವರು ಈ ವಿಮಾ ಸೌಲಭ್ಯದ ವಿವರಗಳನ್ನು ಸಂಘದ ಸಿಬ್ಬಂದಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಪಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಪಿ.ಬಿ. ದಿವಾಕರ ರೈ ಮತ್ತು ಡಾ. ಬಿ. ಸಂಜೀವ ರೈಯವರು ಮತ್ತುವಿಮಾ ಕಂಪೆನಿಯ ಅಧಿಕಾರಿಗಳಾದ ನಂದಕುಮಾರ್, ವಿಜಯ ಕಾರ್ತಿಕ್, ಕೃಷ್ಣ ಪ್ರಭುರವರು ಮತ್ತು ಸಂಘದ ಕೇಂದ್ರ ಕಛೇರಿ ಸಿಬ್ಬಂದಿಗಳು, ಎಲ್ಲಾ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಶ್ರೀಮತಿ ಕಾವ್ಯಶ್ರೀಯವರು ಪ್ರಾರ್ಥಿಸಿದರು. ಶಾಖಾಧಿಕಾರಿ ತಿಮ್ಮಯ್ಯ ಶೆಟ್ಟಿಯವರು ವಂದಿಸಿದರು ಹಾಗೂ ಮಹಾಪ್ರಬಂಧಕರಾದ ಗಣೇಶ್ ಜಿ.ಕೆ ರವರು ಕಾರ್ಯಕ್ರಮವನ್ನು ನಿರೂಪಿಸಿದರು.