ಅಜೆಕಾರ: ಮರ್ಣೆ ನಿವಾಸಿ ಚಿಂದು (88) ಇವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಾ. 2 ರಂದು ನಡೆದಿದೆ.
ಪಕ್ಕದ ಮನೆಯಾದ ತನ್ನ ಅಕ್ಕನ ಮನೆಗೆ ಹೋಗಿ ಬರುತ್ತೇನೆ ಎಂದು ತಮ್ಮ ಮಗಳಿಗೆ ತಿಳಿಸಿ ಹೋಗಿದ್ದು, ಕೆಲವು ಗಂಟೆಗೆಯಾದರೂ ಚಿಂದು ಯವರು ವಾಪಾಸ್ಸು ಮನೆಗೆ ಬಾರದೇ ಇದ್ದ ಕಾರಣ, ಹುಡುಕಿದಾಗ ಅಲ್ಲಿಯೇ ಮನೆಯ ಹತ್ತಿರದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾರೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ