ಕಾರ್ಕಳ ತಾಲೂಕಿನಲ್ಲಿ ಮಾ. 12ರಂದು ಸಂಜೆ ಸುರಿದ ಗಾಳಿ ಮಳೆಗೆ ವಿವಿಧೆಡೆ ಅಪಾರ ಹಾನಿಯುಂಟಾಗಿದೆ.
ಕಾರ್ಕಳ ಕಸಬಾ ಗ್ರಾಮದ ಆನಂದರವರ ವಾಸ್ತವ್ಯದ ಮನೆಗೆ ಹಾನಿಯಾಗಿ ರೂ. 30ಸಾವಿರ, ನಿಟ್ಟೆಯ ಗುಲಾಬಿ ದೇವಾಡಿಗರವರ ವಾಸ್ತವ್ಯದ ಮನೆಗೆ ಹಾನಿಯಾಗಿ ರೂ. 90ಸಾವಿರ, ಕುಕ್ಕುಂದೂರು ಗ್ರಾಮದ ಕ್ಲಮೆಂಟ್ ವಲೇರಿಯನ್ ಅರಾನ್ನಾ ನಕ್ರೆ ಇವರ ಮನೆಗೆ ಹಾನಿಯಾಗಿ ರೂ. 25ಸಾವಿರ, ಕಾಂತಾವರ ಸಂಪ ಮೇರರವರ ಮನೆಗೆ ಹಾನಿಯಾಗಿ ರೂ. 30ಸಾವಿರ ನಷ್ಟ ಉಂಟಾಗಿದೆ.
ಮುಂಡ್ಕೂರು ಗ್ರಾಮದ ಶೀನ ಮೂಲ್ಯರವರ ಮನೆಗೆ ಹಾನಿಯಾಗಿ ರೂ. 80ಸಾವಿರ, ಸುಂದರಿ ಇವರ ಮನೆಗೆ ಹಾನಿಯಾಗಿ ರೂ. 50ಸಾವಿರ, ಚಂದು ಪೂಜಾರಿ ಇವರ ಮನೆಗೆ ಹಾನಿಯಾಗಿ 20ಸಾವಿರ, ಪ್ರೇಮ ಕೆ. ಶೆಟ್ಟಿಯವರ ಮನೆಗೆ ಹಾನಿಯಾಗಿ ರೂ. 40ಸಾವಿರ, ರೆಂಜಾಳ ಗ್ರಾಮದ ಸಂಜೀವ ಮೇರ ಇವರ ಮನೆಗೆ ಹಾನಿಯಾಗಿ ರೂ. 20ಸಾವಿರ, ನಲ್ಲೂರಿನ ಲಕ್ಷ್ಮೀ ಪೂಜಾರಿಯವರ ಮನೆಗೆ ಹಾನಿಯಾಗಿ ರೂ. 10ಸಾವಿರ, ಎರ್ಲಪಾಡಿಯ ಪ್ರಕಾಶ್ ಆಚಾರ್ಯರವರ ದನದ ಕೊಟ್ಟಿಗೆಗೆ ಹಾನಿಯಾಗಿ ರೂ. 5ಸಾವಿರ ನಷ್ಟ ಉಂಟಾಗಿದೆ.